ಸುಳ್ಯ: ಕೆಎಸ್‌ಆರ್‌ಟಿಸಿ ಬಸ್‌ನಿಂದ ಬಿದ್ದು ಮಹಿಳೆಯೊಬ್ಬರು ಗಾಯಗೊಂಡ ಘಟನೆಯೊಂದು ಮಂಗಳವಾರ ಸುಳ್ಯ ತಾಲೂಕಿನ ಸೋಣಂಗೇರಿಯಲ್ಲಿ ಸಂಭವಿಸಿದೆ.
ದುಗಲಡ್ಕದ ಕೊಳಂಜಿಕೋಡಿಯ ಅಬ್ದುಲ್ಲ ಅವರ ಪತ್ನಿ ಮೈಮುನಾ (60) ಗಾಯಗೊಂಡವರು.
ಬೆಳ್ಳಾರೆಯಿಂದ ಸುಳ್ಯಕ್ಕೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬಂದ ಮಹಿಳೆಯು ಸೋಣಂಗೇರಿಯಲ್ಲಿ ಇಳಿಯಲು ಬಸ್ ನಿಲ್ಲುವ ಮೊದಲೇ ಇಳಿದ ಕಾರಣ ಆಯತಪ್ಪಿ ಬಸ್‌ನಿಂದ ಬಿದ್ದು ಕಾಲಿಗೆ ಗಂಭೀರ ಗಾಯವಾಗಿದೆ ಎನ್ನಲಾಗಿದೆ.
ಕೂಡಲೇ ಸಂತೋಷ್ ಕೊಡಿಯಾಲ ಮತ್ತಿತರರು ಸೇರಿ ಗಾಯಗೊಂಡ ಮಹಿಳೆಯನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
إرسال تعليق