ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ತಿರುಪತಿ ದೇವರ ದರ್ಶನ ಕ್ಕೆ ಟಿಕೆಟ್ ಬುಕಿಂಗ್ ಆರಂಭ

ತಿರುಪತಿ ದೇವರ ದರ್ಶನ ಕ್ಕೆ ಟಿಕೆಟ್ ಬುಕಿಂಗ್ ಆರಂಭ

 


ತಿರುಪತಿ: ಆಂಧ್ರಪ್ರದೇಶದ ತಿರುಪತಿ ವೆಂಕಟೇಶ್ವರ ದೇವರ ನವೆಂಬರ್‌ ತಿಂಗಳ ದರ್ಶನಕ್ಕೆ ಬುಧವಾರದಿಂದ ಬುಕಿಂಗ್‌ ಆರಂಭವಾಗಲಿದೆ.


 300 ರೂ. ಕೊಟ್ಟು ವಿಶೇಷ ದರ್ಶನಕ್ಕೆ ತೆರಳಲಿಚ್ಛಿಸುವ ಭಕ್ತರು ಬೆಳಗ್ಗೆ 9 ಗಂಟೆಯಿಂದ ಟಿಕೆಟ್‌ ಬುಕ್‌ ಮಾಡಿಕೊಳ್ಳಬಹುದು.


ಹಾಗೆ ಶ್ರೀವಾರಿ ಅರ್ಜಿತ ಸೇವಾ ಟಿಕೆಟ್‌ಗಳನ್ನು ಮಧ್ಯಾಹ್ನ 3 ಗಂಟೆ ನಂತರ ಬುಕ್‌ ಮಾಡಬಹುದು.


 ಶ್ರೀವಾರಿ ಸೇವಾ ಎಲೆಕ್ಟ್ರಾನಿಕ್‌ ಡಿಐಪಿ ನೋಂದಣಿಯನ್ನು ಸೆ.21ರ ಬೆಳಗ್ಗೆ 10 ಗಂಟೆಯಿಂದ ಸೆ.23ರ ಬೆಳಗ್ಗೆ 10 ಗಂಟೆಯೊಳಗೆ ಮಾಡಿಕೊಳ್ಳಬಹುದು.


ತಿರುಪತಿಯಲ್ಲಿ ವಸತಿ ಬುಕಿಂಗ್‌ ಮಾಡುವವರು ಸೆ.26ರ ಬೆಳಗ್ಗೆ 9 ಗಂಟೆಯಿಂದ ಬುಕಿಂಗ್‌ ಮಾಡಬಹುದು. 


ಜೊತೆಗೆ ಅಕ್ಟೋಬರ್‌ ತಿಂಗಳ ತಿರುಮಲ ಅಂಗಪ್ರದಕ್ಷಣಮ್‌ಗೆ ಬುಕಿಂಗ್‌ ಮಾಡುವವರು ಸೆ.22ರ ಬೆಳಗ್ಗೆ 9 ಗಂಟೆಯಿಂದ ಬುಕಿಂಗ್‌ ಮಾಡಿಕೊಳ್ಳಬಹುದು ಎಂದು ದೇವಸ್ಥಾನ ಮಂಡಳಿ ತಿಳಿಸಿದೆ.


0 Comments

Post a Comment

Post a Comment (0)

Previous Post Next Post