ಬೆಂಗಳೂರು : ರಾಜ್ಯದ ಪೂರ್ವ ಪ್ರಾಥಮಿಕ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 5.30 ಗಂಟೆ ತರಗತಿ ಕಡ್ಡಾಯವಾಗಿ ನಡೆಸಬೇಕು ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಶಿಕ್ಷಣ ಇಲಾಖೆಯ ನಿಯಮದಂತೆ ಶಾಲೆಗಳನ್ನು ಪ್ರತಿದಿನ 5.30 ಗಂಟೆಗಳು ನಡೆಸುವುದು ಕಡ್ಡಾಯವಾಗಿರುತ್ತದೆ. ಶನಿವಾರವೂ ಅರ್ಧ ದಿನ ಶಾಲೆಯನ್ನು ನಡೆಸಬೇಕಾಗಿರುತ್ತದೆ. ಈ ನಿಯಮದಂತೆ ಶಾಲೆಗಳನ್ನು ನಡೆಸಲು ಇಲಾಖೆಯು ಉಲ್ಲೇಖ (2) ರಲ್ಲಿ ಬೆಂಗಳೂರು ನಗರಕ್ಕೆ ಸೀಮಿತಗೊಳಿಸಿ ಬೆಳಗ್ಗೆ 8 ರಿಂದ 8.30 ರೊಳಗೆ ಶಾಲೆಯನ್ನು ಪ್ರಾರಂಭಿಸಿ ವಿರಾಮದ ಅವಧಿಯನ್ನು ಹೊರತುಪಡಿಸಿ 5.1/2 ಗಂಟೆಗಳ ಕಾಲ ನಡೆಸಬೇಕಾಗಿರುತ್ತದೆ ಎಂದು ತಿಳಿಸಿದೆ.
ಶಿಕ್ಷಣ ಇಲಾಖೆ ಅಧಿಕಾರಿಗಳು ಈ ನಿಯಮ ಪಾಲಿಸಿದ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸಿದಲ್ಲಿ ಅಂತವರ ವಿರುದ್ಧ ಕ್ರಮ ನಿಯಮಾನುಸಾರ ಕ್ರಮ ಕೈಗೊಳ್ಳಲು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ಪ್ರತಿದಿನ ಕಡ್ಡಾಯವಾಗಿ 5.30 ಗಂಟೆಗಳ ಕಾಲ ತರಗತಿಗಳನ್ನು ನಡೆಸಬೇಕು ಎಂಬ ನಿಯಮ ಪಾಲಿಸದ ಖಾಸಗಿ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.
Post a Comment