ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ರಂಗಸಿರಿ ದಸರಾ ಯಕ್ಷ ಪಯಣಕ್ಕೆ ನಾಳೆ (ಸೆ.26) ಚಾಲನೆ

ರಂಗಸಿರಿ ದಸರಾ ಯಕ್ಷ ಪಯಣಕ್ಕೆ ನಾಳೆ (ಸೆ.26) ಚಾಲನೆ



ಬದಿಯಡ್ಕ: ಗಡಿನಾಡು ಕಾಸರಗೋಡಿನ ದಶಮಾನೋತ್ತರ ಸಂಸ್ಥೆ ರಂಗಸಿರಿ ಸಾಂಸ್ಕೃತಿಕ ವೇದಿಕೆಯು ಬದಿಯಡ್ಕ ಕೇಂದ್ರೀಕರಿಸಿಕೊಂಡು ನಾಡುನುಡಿ ಸಂರಕ್ಷಣೆಯ ಹಲವಾರು ಚಟುವಟಿಕೆಗಳನ್ನು ನಿರಂತರವಾಗಿ ನಡೆಸುತ್ತಾ ಬಂದಿದೆ. ಸಂಸ್ಥೆಯು ಈ ವರ್ಷವೂ ರಂಗಸಿರಿ ದಸರಾ ಯಕ್ಷ ಪಯಣ ನಡೆಸಲಿದೆ.


ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 4ವರೆಗೆ ಪ್ರತಿದಿನವೂ ರಂಗಸಿರಿ ತಂಡದಿಂದ ವಿವಿಧೆಡೆಗಳಲ್ಲಿ ಯಕ್ಷಗಾನ ಪ್ರದರ್ಶನಗಳು ನಡೆಯಲಿವೆ. ಪ್ರತಿದಿನವೂ ವಿವಿಧೆಡೆಗಳಲ್ಲಿ ಯಕ್ಷಗಾನ ಪ್ರದರ್ಶನಗಳು ನಡೆಯಲಿದ್ದು, ವಿದ್ಯಾರ್ಥಿಗಳಿಗೆ ಉದ್ಯೋಗ/ಶಾಲೆಯ ಜೊತೆಗೆ ಯಕ್ಷಗಾನ ಪ್ರದರ್ಶನಗಳನ್ನೂ ನಿಭಾಯಿಸುವ ಶಕ್ತಿಯನ್ನು ನೀಡಲಿದೆ. ಆ ಮೂಲಕ ಮೇಳ ತಿರುಗಾಟದ ಪುಟ್ಟ ಅನುಭವವೂ ದೊರಕುತ್ತದೆ. ನಾಡಹಬ್ಬ ದಸರಾ ಪ್ರಯುಕ್ತ ಗಡಿನಾಡಿನಿಂದ "ರಂಗಸಿರಿ ದಸರಾ ಯಕ್ಷ ಪಯಣ" ಗಮನಾರ್ಹವಾಗಿದೆ.


26-9-2022ರಂದು ಸಂಜೆ 4 ಗಂಟೆಗೆ ಬದಿಯಡ್ಕದ ನವಜೀವನ ರಸ್ತೆಯಲ್ಲಿನ ರಾಮಲೀಲಾದಲ್ಲಿ ಪಯಣದ ಉದ್ಘಾಟನೆ ಮತ್ತು ಕವಿಗೋಷ್ಠಿ ನಡೆಯಲಿದೆ. ಕವಿಗೋಷ್ಠಿಯಲ್ಲಿ ನಾಡಿನ ಹಲವಾರು ಕವಿಗಳು ಪಾಲ್ಗೊಳ್ಳಲಿದ್ದಾರೆ.


ರಂಗಸಿರಿ ದಸರಾ ಯಕ್ಷ ಪಯಣ ಕಾರ್ಯಕ್ರಮಗಳ ವಿವರ:

27/09/2022ರಂದು ಸಂಜೆ 5.30-8.30 ಕದ್ರಿ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಸುಂದೋಪಸುಂದ ಕಾಳಗ, ಇಂದ್ರಜಿತು ಕಾಳಗ ಪ್ರದರ್ಶನ ನಡೆಯಲಿದೆ.

28/09/2022- ಸಂಜೆ6:00-9:00- ಮಾಣಿಲ ಶ್ರೀಧಾಮ-ಅತಿಕಾಯ ಮೋಕ್ಷ,ಸುಧನ್ವ ಮೋಕ್ಷ

29/09/2022- ಸಂಜೆ 7:00-9:00- ಹೊಸಂಗಡಿ ರಕ್ತೇಶ್ವರಿ ಸನ್ನಿಧಿ-ಮೀನಾಕ್ಷಿ ಕಲ್ಯಾಣ.

30/09/2022- ಸಂಜೆ 6:00-9:00- ಅಗಲ್ಪಾಡಿ ದುರ್ಗಾಪರಮೇಶ್ವರಿ ದೇವಸ್ಥಾನ -  ಮುರಾಸುರ ವಧೆ.

1/10/2022- ಸಂಜೆ 6:00-8:30- ರಾಜರಾಜೇಶ್ವರಿ ದೇವಸ್ಥಾನ ಮುಂಡಪಳ್ಳ-ಏಕಾದಶೀ ದೇವಿ ಮಹಾತ್ಮೆ.

2-102022- ಸಂಜೆ 6:00-9:00- ಶ್ರೀಧಾಮ ಮಾಣಿಲ- ಗಂಧರ್ವ ಮೋಕ್ಷ, ಇಂದ್ರಜಿತು ಕಾಳಗ

03/10/2022- ರಾತ್ರಿ 8:00-10:30- ಶ್ರೀಸದನ ಶುಳುವಾಲುಮೂಲೆ-ಏಕಾದಶೀ ದೇವಿ ಮಹಾತ್ಮೆ.

04/10/2022- ಬೆಳಗ್ಗೆ 9:30-12:30- ದುರ್ಗಾಲಯ ಜೋಡುಕಲ್ಲು -ಮೀನಾಕ್ಷಿ ಕಲ್ಯಾಣ.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

0 Comments

Post a Comment

Post a Comment (0)

Previous Post Next Post