ಕಾರ್ಕಳ: ಪಿಂಗಾರ ಸಾಹಿತ್ಯ ಬಳಗದ ರೇಮಂಡ್ ಡಿಕೂನಾ ತಾಕೊಡೆ ಇವರ ಸಾರಥ್ಯದಲ್ಲಿ ಕಾರ್ಕಳದ ಕ್ರೈಸ್ಟ್ ಕಿಂಗ್ ವಿದ್ಯಾಲಯದ ಸಭಾಂಗಣದಲ್ಲಿ ಬಹುಭಾಷಾ ಕವಿಗೋಷ್ಠಿ- ಮತ್ತು ಸಾಧಕರ ಸನ್ಮಾನ ಕಾರ್ಯಕ್ರಮಗಳು ನೆರವೇರಿದುವು.
ನಿವೃತ್ತ ವಾಣಿಜ್ಯ ತೆರಿಗೆ ಅಧಿಕಾರಿಗಳಾದ ಜೋಕಿಮ್ ಮೈಕೆಲ್ ಎಚ್ ಪಿಂಟೋರವರು ಕೃತಿಗಳನ್ನು ಖರೀದಿಸುತ್ತಾ ಉದ್ಘಾಟಿಸಿ ಮಾತನಾಡಿ, ಸಾಹಿತ್ಯದ ಕಾರ್ಯಕ್ರಮ ಉದ್ಘಾಟನೆ ಕೃತಿಗಳನ್ನು ಖರೀದಿಸಲು ಉತ್ತೇಜನ ಮಾಡುವುದು ಶ್ಲಾಘನೀಯ ಎಂದರು.
ಅಧ್ಯಕ್ಷತೆಯನ್ನು ಮಂಗಳಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಮೂಲವ್ಯಾಧಿ ಚರ್ಮರೋಗಗಳ ಕ್ಷಾರ ತಜ್ಞ ಮತ್ತು ಬಹು ಪ್ರಕಾರ ಬರಹಗಾರ ಡಾ ಸುರೇಶ ನೆಗಳಗುಳಿ ವಹಿಸಿ ಮಾತನಾಡಿ, ಸಾಹಿತ್ಯದ ಕಾರ್ಯವನ್ನು ನೈಜ ಆಸಕ್ತಿಯ ಜನರ ನಡುವೆ ಹಮ್ಮಿಕೊಂಡರೆ ಆಗಿನ ವಿಮರ್ಶೆ ಸಾಹಿತ್ಯದ ಬೆಳವಣಿಗೆಗೆ ಅನುಕೂಲಕರ ಎಂದರು.
ಸ್ಬಯಂ ಟೈಮ್ಸ್ ವೀವ್ಸ್ ಚಾನೆಲ್ ನ ಸಂಪಾದಕ ವಸಂತ ಕುಮಾರ್ ಮುಖ್ಯ ಅತಿಥಿಗಳಾಗಿದ್ದ ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಅಲ್ಪಸಂಖ್ಯಾತರ ವೇದಿಕೆಯ ಅಧ್ಯಕ್ಷ ಶ್ರೀ ರಾಬರ್ಟ್ ಮಿನೇಜಸ್ ಅವರನ್ನು ಫಲ ಶಾಲು ಹಾರ ಫಲಕ ಸಹಿತ ಸನ್ಮಾನಿಸಲಾಯಿತು.
ಬಳಿಕ ನಡೆದ ಕವಿಗೋಷ್ಠಿಯಲ್ಲಿ ಹಿಂದಿ, ಕನ್ನಡ, ತುಳು, ಹವ್ಯಕ, ಕೊಂಕಣಿ ಪಂಚಾಭಾಷಾ ಕವನಗಳು ಕವಿಗಳಾದ ಶಾಮ್ ಪ್ರಸಾದ್ ಕಾರ್ಕಳ, ವಾಲ್ಟರ್ ಮೊಂತೆರೊ ಬೆಳ್ಮಣ್, ಪ್ರಮೀಳಾ ಪ್ಲಾವಿಯಾ ಕಾರ್ಕಳ, ಕಾಂತಾವರ ಶಿವಾನಂದ ಶೆಣೈ, ಅರವಿಂದ್ ಚಿಪ್ಳೂಣ್'ಕರ್, ಚಿ ವಿಕ್ರಮ್ ಕಾರ್ಕಳ, ಅಷ್ಟಾವಧಾನಿ ಉಮೇಶ್ ಗೌತಮ್ ನಾಯಕ್, ಡಾ ಸುರೇಶ ನೆಗಳಗುಳಿ, ರೇಮಂಡ್ ಡಿಕೂನಾ ತಾಕೊಡೆ ಅವರುಗಳಿಂದ ನಡೆಯಿತು.
ಲೀನಾ ಡಿಸಿಲ್ವಾ ಸಾಣೂರುರವರು ಪ್ರಾರ್ಥನೆಯನ್ನು ಹಾಡಿದರು, ರೇಮಂಡ್ ಡಿಕೂನಾ ತಾಕೊಡೆ ಸ್ವಾಗತಿಸಿದರು, ನವೀನ್ ಸಾಲ್ಯಾನ್' ರವರು ನಿರೂಪಣೆ ಮತ್ತು ಲೋನಾ ವಾಸ್'ರವರು ಧನ್ಯವಾದ ಸಮರ್ಪಣೆ ಗೈದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
Post a Comment