ಮಂಗಳೂರು: ಬಾವುಟ ಗುಡ್ಡೆಯಲ್ಲಿ ನಿರ್ಮಾಣವಾಗಿರುವ ತುಳುನಾಡಿನ ಸ್ವಾತಂತ್ರ್ಯ ಸೇನಾನಿ ಕೆದಂಬಾಡಿ ರಾಮಯ್ಯ ಗೌಡ ಅವರ ಕಂಚಿನ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮದ ಮಂಗಳೂರು ನಗರ ಸ್ವಾಗತ ಸಮಿತಿ ರಚನೆಯ ಕುರಿತು ಸಭೆ ನಡೆಯಿತು.
ಸಭೆಯಲ್ಲಿ ಸಮಿತಿಯ ಗೌರವಾದ್ಯಕ್ಷರಾಗಿ ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವರಾದ ಸುನಿಲ್ ಕುಮಾರ್ ಅವರು ಆಯ್ಕೊಯಾಗಿದ್ದಾರೆ. ಅಧ್ಯಕ್ಷರಾಗಿ ಮೇಯರ್ ಜಯಾನಂದ ಅಂಚನ್, ಪ್ರಧಾನ ಸಂಚಾಲಕರಾಗಿ ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್, ಮಂಗಳೂರು ಉತ್ತರ ಶಾಸಕ ಡಾ.ವೈ ಭರತ್ ಶೆಟ್ಟಿ, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ ಹಾಗೂ ಕಿರಣ್ ಬುಡ್ಲೆಗುತ್ತು ಅವರನ್ನು ಆಯ್ಕೆ ಮಾಡಲಾಗಿದೆ.
ಉಪಾಧ್ಯಕ್ಷರಾಗಿ ಶಶಿಧರ್ ಹೆಗ್ಡೆ, ದಿವಾಕರ್ ಪಾಂಡೇಶ್ವರ, ಜೆಸಿಂತಾ ಆಲ್ಫ್ರೆಡ್, ಭಾಸ್ಕರ್ ಮೈೂಯ್ಲಿ, ಭಾಸ್ಕರ್ ದೇವಸ್ಯ, ಸದಾನಂದ ಡಿ.ಪಿ, ಆನಂದ ಪಿ.ಎಚ್, ಸುರೇಶ ಬೈಲು, ಗಣೇಶ್ ಕಲಾಯಿ, ಪ್ರಧಾನ ಕಾರ್ಯದರ್ಶಿಯಾಗಿ ಉಪಮೇಯರ್ ಪೂರ್ಣಿಮಾ, ರಕ್ಷಿತ್ ಪುತ್ತಿಲ ಅವರು ಆಯ್ಕೆಯಾದರು.
ಕಾರ್ಯದರ್ಶಿಗಳಾಗಿ ಶಕಿಲಾ ಕಾವ, ಹೇಮಲತಾ ರಘು ಸಾಲಿಯಾನ್, ಕಿಶೋರ್ ಕೊಟ್ಟಾರಿ, ನಯನ ಆರ್. ಕೋಟ್ಯಾನ್, ನವೀನ್ ಆರ್. ಡಿ ಸೋಜ, ಎ.ಸಿ ವಿನಯರಾಜ್, ಶಿವರಾಮ ಗೌಡ ನಿನ್ನಿಕಲ್ಲು, ಮಹೇಶ್ ನಡುತೋಟ, ಶಾಂತಪ್ಪ ಯು, ಕಿರಣ್ ಹೊಸೊಳಿಕೆ, ಸದಸ್ಯರಾಗಿ ಸುಮಿತ್ರ ಕರಿಯ, ಜಾನಕಿ ಯಾನೆ ವೇದಾವತಿ, ಸುಮಂಗಳ ರಾವ್, ಮನೋಜ್‌ಕುಮಾರ್,ಸುನೀಲ್ ಕೇರ್ನಡ್ಕ, ರಾಘವೇಂದ್ರ ಪಿ.ಡಿ. ಮಹೇಶ್ ಮೋಂಟಡ್ಕ, ಸುಂದರ್ ಜಿ.ಹೆಚ್, ಚಂದ್ರಶೇಖರ ಆರಿಗ ಪ್ರಚಾರ ಸಮಿತಿಯ ಪ್ರಮುಖರಾಗಿ ಸುಧೀರ್ ಶೆಟ್ಟಿ ಕಣ್ಣೂರು ಹಾಗೂ ಭಾಸ್ಕರ್ ದೇವಸ್ಯ ಆಯ್ಕೆಯಾಗಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
Post a Comment