ಬೆಂಗಳೂರು: ಮಂಗಳೂರು, ಹುಬ್ಬಳ್ಳಿ, ಬೆಳಗಾವಿ, ಹೈದರಾಬಾದ್, ಚೆನ್ನೈ ಮೊದಲಾದ ನಗರಗಳಿಂದ ಬಂದವರು ಏರ್ ಪೋರ್ಟ್ ನಿಂದ ಊರಿಗೆ ತೆರಳಲು ಒಮ್ಮೊಮ್ಮೆ ವಿಮಾನ ಪ್ರಯಾಣದಷ್ಟೇ ಸಮಯ ತೆಗೆದುಕೊಳ್ಳುತ್ತದೆ.
ಹಾಗೆಯೇ ಇಲ್ಲಿಂದ ಇತರೆ ನಗರಗಳಿಗೆ ತೆರಳುವವರು ಟ್ರಾಫಿಕ್ ನಲ್ಲಿ ಸಿಲುಕಿ ತಮ್ಮ ಪ್ರಯಾಣ ತಪ್ಪಿಸಿಕೊಂಡ ಘಟನೆಗಳೂ ನಡೆದಿವೆ.
ಇಂತಹ ಸಮಸ್ಯೆಗೆ ಪರಿಹಾರ ನೀಡಲು ಬ್ಲೇಡ್ ಇಂಡಿಯಾ ಸಂಸ್ಥೆ ಮುಂದಾಗಿದ್ದು, ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಲಿಕಾಪ್ಟರ್ ಸೇವೆ ನೀಡಲು ಸಿದ್ಧತೆ ನಡೆಸಿದ್ದು, ಅಕ್ಟೋಬರ್ 10 ರಿಂದ ಇದು ಆರಂಭಗೊಳ್ಳಲಿದೆ.
ಈ ಸೇವೆ ಆರಂಭವಾದ ಬಳಿಕ ಕೇವಲ 12 ನಿಮಿಷಗಳಲ್ಲಿ ವಿಮಾನ ನಿಲ್ದಾಣ ತಲುಪಬಹುದಾಗಿದೆ.
ಐದು ಆಸನ ಸಾಮರ್ಥ್ಯದ ಎಚ್ 125 ಡಿವಿಜಿ ಏರ್ ಬಸ್ ಹೆಲಿಕಾಪ್ಟರ್ ಅನ್ನು ಈ ಸೇವೆಗಾಗಿ ಬಳಸಿಕೊಳ್ಳಲಾಗುತ್ತಿದ್ದು, ಒಬ್ಬರಿಗೆ 3,250 ರೂಪಾಯಿ ಪ್ರಯಾಣ ದರ ನಿಗದಿಪಡಿಸಲಾಗಿದೆ.
ವಾರದ ಐದು ದಿನ ಅಂದರೆ ಸೋಮವಾರದಿಂದ ಶುಕ್ರವಾರದವರೆಗೆ ಈ ಹೆಲಿಕಾಪ್ಟರ್ ಸೇವೆ ಲಭ್ಯವಿದ್ದು, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 8-30ಕ್ಕೆ ಎಚ್‌ಎಎಲ್ ಗೆ ಹಾಗೂ 9-00ಕ್ಕೆ ಎಚ್‌ಎಎಲ್ ನಿಂದ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸೇವೆ ಇರಲಿದೆ.
ಅದೇ ರೀತಿ ಸಂಜೆ 4-15ಕ್ಕೆ ಎಚ್‌ಎಎಲ್ ನಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ, 4-45ಕ್ಕೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಎಚ್‌ಎಲ್ ಗೆ ಸೇವೆ ಲಭ್ಯವಿರಲಿದೆ.
Post a Comment