ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕೇರಳದ ರೈಲು ಅಪಘಾತದಲ್ಲಿ ವಿಟ್ಲದ ಯುವಕ ಸಾವು

ಕೇರಳದ ರೈಲು ಅಪಘಾತದಲ್ಲಿ ವಿಟ್ಲದ ಯುವಕ ಸಾವು

 


ಬಂಟ್ವಾಳ : ಕೇರಳದಲ್ಲಿ ನಡೆದ ರೈಲು ಅಪಘಾತವೊಂದರಲ್ಲಿ ವಿಟ್ಲ ಸಮೀಪದ ಕಡಂಬು ಎಂಬಲ್ಲಿನ ಯುವಕ ಮೃತಪಟ್ಟ ಘಟನೆ ಬುಧವಾರ ರಾತ್ರಿ ನಡೆದಿರುವುದು ವರದಿಯಾಗಿದೆ.


ವಿಟ್ಲ ಪಡ್ನೂರು ಗ್ರಾಮದ ಕಡಂಬು ಪಿಲಿವಳಚ್ಚಿಲ್ ನಿವಾಸಿ ಅಶ್ರಫ್ ಉಸ್ಮಾನ್ ಎಂಬವರ ಪುತ್ರ ಮುಹಮ್ಮದ್ ಅನಸ್ (19) ಮೃತಪಟ್ಟ ಯುವಕ.


ಎ.ಸಿ. ಮೆಕ್ಯಾನಿಕ್ ಆಗಿದ್ದ ಅನಸ್, ಇತ್ತೀಚೆಗೆ ಉದ್ಯೋಗಕ್ಕಾಗಿ ಕೇರಳದ ಕೊಚ್ಚಿಗೆ ತೆರಳಿದ್ದರೆನ್ನಲಾಗಿದೆ. 


ಬುಧವಾರ ರಾತ್ರಿ ರೈಲಿನಲ್ಲಿ ಊರಿಗೆ ಹಿಂದಿರುಗುತ್ತಿದ್ದ ವೇಳೆ ಎರ್ನಾಕುಳಂ ಜಿಲ್ಲೆಯ ಆಳುವ ಸಮೀಪ ಆಕಸ್ಮಿಕವಾಗಿ ಕಾಲು ಜಾರಿ ರೈಲಿನಿಂದ ಹೊರಗೆ ಎಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

0 Comments

Post a Comment

Post a Comment (0)

Previous Post Next Post