ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಐವರ್ನಾಡು ; ಮನೆಗೆ ಆಕಸ್ಮಿಕ ಬೆಂಕಿ ಬಿದ್ದು, ಯಜಮಾನ ಸಜೀವ ದಹನ

ಐವರ್ನಾಡು ; ಮನೆಗೆ ಆಕಸ್ಮಿಕ ಬೆಂಕಿ ಬಿದ್ದು, ಯಜಮಾನ ಸಜೀವ ದಹನ

 


ಸುಳ್ಯ : ಮನೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಮನೆಯೊಳಗೆ ಮಲಗಿದ್ದ ಯಜಮಾನ ಜೀವಂತ ದಹನವಾಗಿ ಸಾವನ್ನಪ್ಪಿದ ಘಟನೆಯೊಂದು ಬೆಳ್ಳಾರೆ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ.


ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದ ಪರ್ಲಿಕಜೆ ಸುಧಾಕರ (47) ದುರ್ಘಟನೆಯಲ್ಲಿ ಸಾವಿಗೀಡಾದ ವ್ಯಕ್ತಿ.


ಇಂದು ಬೆಳಿಗ್ಗೆ ಸುಧಾಕರರು ಮನೆಯಲ್ಲಿ ಮಲಗಿದ್ದು, ಪತ್ನಿ ಟ್ಯಾಪಿಂಗ್‌ಗೆಂದು ಹೋಗಿದ್ದರು. ಮಗಳು ಶಾಲೆಗೆ ತೆರಳಿದ್ದಳು. ಈ ಹೊತ್ತಿನಲ್ಲಿ ಬೆಂಕಿ ಮನೆಯ ಒಂದು ಪಾರ್ಶ್ವವನ್ನು ಸುಟ್ಟು ಹಾಕಿತ್ತು.


ಸುಧಾಕರರು ಸ್ವಲ್ಪ ಅಸೌಖ್ಯಕ್ಕೀಡಾಗಿರುವ ಹಿನ್ನಲೆಯಲ್ಲಿ ಅವರಿಗೆ ಹೊರಗೆ ಓಡಲು ಸಾಧ್ಯವಾಗಲಿಲ್ಲ. ಸ್ಥಳದಲ್ಲಿಯೇ ಬೆಂಕಿಯಲ್ಲಿ ದಹಿಸಲ್ಪಟ್ಟು ಸಾವನ್ನಪ್ಪಿದರೆಂದು ತಿಳಿದು ಬಂದಿದೆ. ಮನೆಯೊಳಗೆ ಉರಿಸಿದ್ದ ದೀಪದಿಂದ ಬೆಂಕಿ ಹತ್ತಿಕೊಂಡಿರಬಹುದೆಂದು ಶಂಕಿಸಲಾಗಿದೆ.

ಪೊಲೀಸರು, ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿದರು.


0 تعليقات

إرسال تعليق

Post a Comment (0)

أحدث أقدم