ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಡಾ. ಶ್ರೀಪತಿ ರಾವ್ ಅವರಿಗೆ ಗುರುವಂದನ

ಡಾ. ಶ್ರೀಪತಿ ರಾವ್ ಅವರಿಗೆ ಗುರುವಂದನ


ಮಂಗಳೂರು: ಖ್ಯಾತ ರಸಾಯನ ಶಾಸ್ತ್ರ ಪ್ರಾಧ್ಯಾಪಕ, ಅಳಿಕೆ ಲೋಕ ಸೇವಾ ವಿದ್ಯಾಸಂಸ್ಥೆ ಮೊದಲ್ಗೊಂಡು ಸೈಂಟ್ ಎಲೋಶಿಯಸ್ ಕಾಲೇಜು, ಎಕ್ಸ್‌ಪರ್ಟ್ ಪಿ.ಯು ಕಾಲೇಜು, ಶಾರದಾ ವಿದ್ಯಾಸಂಸ್ಥೆ ಗಳಲ್ಲಿ ಪ್ರಾಚಾರ್ಯರಾಗಿ, ನಿರ್ದೇಶಕರಾಗಿ ವಿವಿಧ ಹುದ್ದೆಯಲ್ಲಿದ್ದ ಪ್ರಸ್ತುತ ನಿವೃತ್ತಿ ಜೀವನದಲ್ಲೂ ಕ್ರಿಯಾಶೀಲರಾಗಿರುವ ಪಂಪ್‌ವೆಲ್ ಸಮೀಪ ವಾಸ್ತವ್ಯವಿರುವ ಡಾ| ಶ್ರೀಪತಿ ರಾವ್ ಇವರನ್ನು ಸೆಪ್ಟೆಂಬರ್ 5 ರ ಶಿಕ್ಷಕರ ದಿನಾಚರಣೆಯಂದು ಹೂ ಹಾರ ಶಾಲು ಫಲ ತಾಂಬೂಲ ಹಾಗೂ ಧೀರತಮ್ಮನ ಕಬ್ಬ ಹಾಗೂ ಪಡುಗಡಲ ತೆರೆಮಿಂಚುಗಳ ಸಹಿತ ಸನ್ಮಾನಿಸಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ಮಂಗಳೂರಿನ ಮಂಗಳಾ ಆಸ್ಪತ್ರೆಯ ಮೂಲವ್ಯಾಧಿ ಚರ್ಮರೋಗಾದಿಗಳ ಕ್ಷಾರ ಚಿಕಿತ್ಸೆ ಹಾಗೂ ಶಸ್ತ್ರ ಚಿಕಿತ್ಸಾ ತಜ್ಞ ಮತ್ತು ಬರಹಗಾರ ಡಾಸುರೇಶ ನೆಗಳಗುಳಿಯವರು ತನ್ನ ವಿದ್ಯಾಭ್ಯಾಸ ಅವಧಿಯಲ್ಲಿ ಈ ಗುರುಗಳ ಕೊಡುಗೆ ಅಪಾರ ಹಾಗೂ ಅವರ ಮಾರ್ಗದರ್ಶನವೇ ತನ್ನ ಬದುಕಿನ ಯಶಸ್ಸಿಗೆ ಊರುಗೋಲು ಎಂದರು.


ಸನ್ಮಾನ ಸ್ವೀಕರಿಸಿ ಡಾ ಶ್ರೀಪತಿರಾವ್ ಮಾತನಾಡುತ್ತಾ ಶಿಸ್ತುಬದ್ಧ ಕಲಿಕೆಗೆ ಇರುವ ಮಹತ್ವವನ್ನು ಒತ್ತಿ ಹೇಳಿದರಲ್ಲದೆ ಹಿಂದಿನ ತನ್ನ ವೃತ್ತಿಜೀವನದ ಹಲವು ಮಜಲುಗಳನ್ನು ನೆನಪಿಸಿಕೊಂಡರು. ಗುರು ಶಿಷ್ಯ ಸಂಬಂಧವು ವಿಧೇಯತೆಯನ್ನ ಅವಲಂಬಿಸಿದ್ದು ವೈದ್ಯನಾಗಿ ಹಾಗೂ ಬರಹಗಾರನಾಗಿ ಬಹಳ ಎತ್ತರಕ್ಕೇರಿದ್ದರೂ ವಿನಮ್ರನಾಗಿ ತನ್ನನ್ನು ಪುರಸ್ಕಾರ ಮಾಡುವ ಮನ ಮಾಡಿರುವುದು ಅದರ ಸಂಕೇತ ಎಂದು ಹರಸಿದರು.


ಪಿಂಗಾರ ಪತ್ರಿಕೆಯ ಮುಖ್ಯಸ್ಥ, ಪತ್ರಕರ್ತ ಹಾಗೂ ಬರಹಗಾರ ರೇಮಂಡ್ ಡಿಕೂನಾ ತಾಕೊಡೆಯವರು ಉಪಸ್ಥಿತರಿದ್ದರು. ಅವರು ಮಾತನಾಡುತ್ತಾ ಶ್ರೇಷ್ಠ ಗುರುಗಳು ಎಲ್ಲಿದ್ದರೂ ಸಲ್ಲುತ್ತಾರೆ. ತ್ಯಾಗವೇ ಅವರ ಆತ್ಮ.ಅಂತಹವರಲ್ಲಿ ಶ್ರೀಪತಿ ರಾವ್ ಸಹ ಗಣಿಸಲ್ಪಡುತ್ತಾರೆ ಎಂದು ಶ್ಲಾಘಿಸಿದರು. ಅವರ ಪತ್ನಿ ಶಶಿಕಲಾ ರಾವ್ ರವರು ನಗುಮೊಗದಿಂದ ಉಪಚಾರ ಮಾಡಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 تعليقات

إرسال تعليق

Post a Comment (0)

أحدث أقدم