ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ತ್ಯಾವರೆಕೊಪ್ಪ ಹಿರಿಯ ಹುಲಿ ಹನುಮ ಸಾವು

ತ್ಯಾವರೆಕೊಪ್ಪ ಹಿರಿಯ ಹುಲಿ ಹನುಮ ಸಾವು




 ಶಿವಮೊಗ್ಗ : ಕಳೆದ ಕೆಲವು ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಶಿವಮೊಗ್ಗ ಸಮೀಪದ ತ್ಯಾವರೆಕೊಪ್ಪ ಹುಲಿ - ಸಿಂಹಧಾಮದ ಹಿರಿಯ ಹುಲಿ 'ಹನುಮ' ಬುಧವಾರ ರಾತ್ರಿ ಮೃತಪಟ್ಟಿದೆ.


20 ವರ್ಷದ ಹನುಮನಿಗೆ ನಿರಂತರವಾಗಿ ಚಿಕಿತ್ಸೆ ನೀಡಲಾಗಿದ್ದು, ಆರೋಗ್ಯವು ಸಹ ಸುಧಾರಣೆ ಕಂಡಿತ್ತು, ಆದರೆ ವಯೋ ಸಹಜ ಸಮಸ್ಯೆಗಳ ಕಾರಣ ಹನುಮ ಮೃತಪಟ್ಟಿರಬಹುದು ಎಂದು ಹೇಳಲಾಗಿದೆ.


ಮಲೆ ಶಂಕರ ಹಾಗೂ ಚಾಮುಂಡಿಯ ಮಗನಾದ 'ಹನುಮ'ನ ಸಾವಿನಿಂದಾಗಿ ಇದೀಗ ಸಫಾರಿಯಲ್ಲಿರುವ ಹುಲಿಗಳ ಸಂಖ್ಯೆ ನಾಲ್ಕಕ್ಕೆ ಇಳಿಕೆಯಾಗಿದೆ.

0 Comments

Post a Comment

Post a Comment (0)

Previous Post Next Post