ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಭಾರತೀಯ ಜನತಾ ಪಕ್ಷದ ನಾಯಕ ಅರವಿಂದ್ ಗಿರಿ ನಿಧನ

ಭಾರತೀಯ ಜನತಾ ಪಕ್ಷದ ನಾಯಕ ಅರವಿಂದ್ ಗಿರಿ ನಿಧನ

 


ಲಕ್ನೋ: ಭಾರತೀಯ ಜನತಾ ಪಕ್ಷದ ನಾಯಕ ಮತ್ತು ಲಖೀಂಪುರ ಖೇರಿಯ ಗೋಕರ್ಣನಾಥ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ್ ಗಿರಿ ನಿಧನರಾಗಿದ್ದಾರೆ.


ಐದು ಬಾರಿ ಶಾಸಕರಾಗಿದ್ದ ಅರವಿಂದ್ ಗಿರಿ(64) ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.


ಅರವಿಂದ ಗಿರಿ ಅವರ ನಿಧನದ ಸುದ್ದಿಯನ್ನು ಅವರ ಹಿರಿಯ ಸಹೋದರ ಮಧುಸೂದನ್​ ಗಿರಿ ಖಚಿತಪಡಿಸಿದ್ದಾರೆ. ಆರೋಗ್ಯವಾಗಿದ್ದ ಅವರು ಲಖನೌಗೆ ತೆರಳುತ್ತಿದ್ದರು. ಈ ವೇಳೆ ದಾರಿಮಧ್ಯೆ ಹೃದಯಾಘಾತವಾಗಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.

0 تعليقات

إرسال تعليق

Post a Comment (0)

أحدث أقدم