ಲಡಾಕ್: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಮ್ಮನ್ನು ಅಗಲಿ ಒಂದು ವರ್ಷ ಆಗುತ್ತಾ ಬರುತ್ತಿದೆ. ಆದರೆ ಅಭಿಮಾನಿಗಳ ಮನಸ್ಸಿನಲ್ಲಿ ಅಪ್ಪು ಶಾಶ್ವತವಾಗಿದ್ದಾರೆ. ಇದಕ್ಕೆ ನಿದರ್ಶನವೆಂಬಂತೆ ಶಿವಮೊಗ್ಗದ ಯುವಕರು, ವಿಶ್ವದ ಅತಿ ಎತ್ತರದ ಲಡಾಕ್‌ನ ರಸ್ತೆಯಲ್ಲಿ ಅಪ್ಪು ಫೋಟೊ ಹಾಗೂ ಕನ್ನಡದ ಬಾವುಟ ಅನಾವರಣ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಜಗತ್ತಿನ ಅತಿ ಎತ್ತರದ ರಸ್ತೆಯಾದ ಭಾರತದ ಖರ್ದುಂಗ್ ಲಾ ಪಾಸ್ (17,582 ಅಡಿ ಎತ್ತರ) ರಸ್ತೆಯಲ್ಲಿ ಶಿವಮೊಗ್ಗದ ಅಪ್ಪು ಅಭಿಮಾನಿಗಳಾದ ವಿನಯ್ ತಾಂದ್ಲೆ, ಪ್ರಮೋದ್, ಗೌತಮ್, ಹರೀಶ್ ಹಾಗೂ ಕಿರಣ್ ರಸ್ತೆಯಲ್ಲಿ ಅಪ್ಪು ಫೋಟೊ ಹಾಗೂ ಕನ್ನಡದ ಬಾವುಟ ಪ್ರದರ್ಶಿಸಿದ್ದಾರೆ.
ಅಪ್ಪು ಫೋಟೊ ಹಾಗೂ ಕನ್ನಡ ಧ್ವಜವನ್ನು ಹಾರಿಸಲೆಂದೇ ಯುವಕರು ಲಡಾಕ್ ಪ್ರವಾಸ ಕೈಗೊಂಡಿದ್ದರು..
إرسال تعليق