ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸುಳ್ಯ ; ಮದರಸದಿಂದ ಮನೆಗೆ ಬರಲು ರಸ್ತೆ ದಾಟುವ ವೇಳೆ ಬೈಕ್ ಡಿಕ್ಕಿ ಹೊಡೆದು ಬಾಲಕಿ ಮೃತ್ಯು

ಸುಳ್ಯ ; ಮದರಸದಿಂದ ಮನೆಗೆ ಬರಲು ರಸ್ತೆ ದಾಟುವ ವೇಳೆ ಬೈಕ್ ಡಿಕ್ಕಿ ಹೊಡೆದು ಬಾಲಕಿ ಮೃತ್ಯು

 


ಸುಳ್ಯ: ಮದರಸದಿಂದ ಮನೆಗೆ ಬರಲು ರಸ್ತೆ ದಾಟುತ್ತಿದ್ದ ಬಾಲಕಿಗೆ ಬೈಕ್ ಡಿಕ್ಕಿಯಾದ ಪರಿಣಾಮ ಬಾಲಕಿ ಮೃತಪಟ್ಟ ಘಟನೆಯೊಂದು ಇಂದು (ಶನಿವಾರ) ಸುಳ್ಯ ಸಮೀಪದ ಅರಂಬೂರು ಎಂಬಲ್ಲಿ ಸಂಭವಿಸಿದೆ.


ಸುಳ್ಯದ ಅರಂಬೂರು ಬಳಿಯ ಪಾಲಡ್ಕ ಎಂಬಲ್ಲಿ ಘಟನೆ ಸಂಭವಿಸಿದೆ.


ಪಾಲಡ್ಕದ ರಶೀದ್ ಎಂಬವರ ಪುತ್ರಿ ರಿಫಾ (6 )ಮೃತ ಬಾಲಕಿ.


ರಿಫಾ ಇಂದು ಬೆಳಿಗ್ಗೆ ಮದ್ರಸದಿಂದ ಮನೆಗೆ ಹಿಂತಿರುಗುವ ವೇಳೆ ರಸ್ತೆ ದಾಟುತ್ತಿದ್ದಾಗ ಅರಂತೋಡು ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಬೈಕೊಂದು ಢಿಕ್ಕಿ ಹೊಡೆದು ಈ ಘಟನೆ ನಡೆದಿದೆ.


ತಕ್ಷಣ ಬಾಲಕಿಯನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.


0 تعليقات

إرسال تعليق

Post a Comment (0)

أحدث أقدم