ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನಿಂತಿದ್ದ ಬಸ್ ಹಿಂದಕ್ಕೆ ಚಲಿಸಿ ಅಪಾಯದಿಂದ ಪಾರು ಮಾಡಿದ ಕಾಲೇಜು ವಿದ್ಯಾರ್ಥಿ

ನಿಂತಿದ್ದ ಬಸ್ ಹಿಂದಕ್ಕೆ ಚಲಿಸಿ ಅಪಾಯದಿಂದ ಪಾರು ಮಾಡಿದ ಕಾಲೇಜು ವಿದ್ಯಾರ್ಥಿ

 


ಪುತ್ತೂರು : ನಿಲ್ಲಿಸಿದ್ದ ಬಸ್‌ ಹಿಮ್ಮುಖವಾಗಿ ಚಲಿಸಿದಾಗ, ಚಾಲಕನ ಹಿಂದಿನ ಸೀಟ್‌ನಲ್ಲಿ ಕುಳಿತಿದ್ದ ವಿದ್ಯಾರ್ಥಿ ಸಿಜಾನ್ ಹಸನ್ ತಕ್ಷಣ ಬಸ್ ಅನ್ನು ನಿಯಂತ್ರಿಸಿ ಜನರ ರಕ್ಷಣೆ ಮಾಡಿದ್ದಾನೆ.


ಪುತ್ತೂರು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್‌ನಲ್ಲಿ ಅನೇಕ ಪ್ರಯಾಣಿಕರ ಜೊತೆಗೆ, ಸೇಂಟ್ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿ ಸಿಜಾನ್ ಕುಳಿತಿದ್ದರು.


 ಇದ್ದಕ್ಕಿದ್ದಂತೆ ಬಸ್ ಹಿಮ್ಮುಖವಾಗಿ ಚಲಿಸಲಾರಂಭಿಸಿತು. ತಕ್ಷಣ ಚಾಲಕನ ಸೀಟಿಗೆ ಜಿಗಿದ ಸಿಜಾನ್ ಬ್ರೇಕ್ ಹಾಕಿ ಬಸ್ ಅನ್ನು ನಿಲ್ಲಿಸಿದರು. 


ಅಷ್ಟರಲ್ಲಿ ಇನ್ನೊಂದು ಬಸ್‌ನ ಚಾಲಕ ಬಂದು ಹ್ಯಾಂಡ್ ಬ್ರೇಕ್ ಹಾಕಲು ಸಹಕರಿಸಿದರು.ಈತ  ಅಬ್ದುಲ್ ಸಲಾಂ ಮತ್ತು ತಾಹಿರಾ ದಂಪತಿ ಪುತ್ರ.

0 تعليقات

إرسال تعليق

Post a Comment (0)

أحدث أقدم