ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನೆಮ್ಮದಿ ಕಳೆದುಕೊಂಡ 25 ಕೋಟಿ ಲಾಟರಿ ವಿಜೇತ ಕುಟುಂಬ

ನೆಮ್ಮದಿ ಕಳೆದುಕೊಂಡ 25 ಕೋಟಿ ಲಾಟರಿ ವಿಜೇತ ಕುಟುಂಬ

 


ಕೇರಳ : 25 ಕೋಟಿ ಓಣಂ ಬಂಪರ್ ಲಾಟರಿ ವಿಜೇತ ಅನುಪ್ ಅವರಾಗಿದ್ದು, ಲಾಟರಿ ಗೆದ್ದ ವಿಚಾರ ಪ್ರಚಾರವಾಗುತ್ತಿದ್ದಂತೆ, ಮನೆ ಮುಂದೆ ಸಾಲ ಕೇಳುವವರ ಸಾಲೇ ತುಂಬಿಕೊಳ್ಳುತ್ತಿದ್ದು, ನೆಮ್ಮದಿಗೆ 'ಬಹುಮಾನ' ಕೊಳ್ಳಿಯಿಟ್ಟಿದೆ ಎಂದು ಖುದ್ದಾಗಿ ಅವರೇ ಹೇಳಿಕೊಂಡಿದ್ದಾರೆ.

ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಅವರು ವಿಡಿಯೋ ಶೇರ್ ಮಾಡಿದ್ದು, ತಮ್ಮ ಅಳಲು ತೋಡಿಕೊಂಡಿದ್ದಾರೆ. ಲಾಟರಿ ಗೆದ್ದಾಗ ಬಹಳಷ್ಟು ಸಂತಸವಾಗಿತ್ತು.

ಆದರೆ ಆ ಸಂತಸ ಈಗ ದಿನಕಳೆದಂತೆ ದುಃಖಕ್ಕೆ ದಾರಿ ಮಾಡಿಕೊಟ್ಟಿದೆ. ಮನೆಯಿಂದ ಹೊರಗೆ ಕಾಲಿಡಲೂ ಆಗುತ್ತಿಲ್ಲ. ಮಗುವಿಗೆ ಆನಾರೋಗ್ಯ ಕಾಡಿದರೆ ಆಸ್ಪತ್ರೆಗೆ ಹೋಗಲು ಸಾಧ್ಯವಿಲ್ಲ. ಎಲ್ಲಿ ಹೋದರೂ ಜನ ಹುಡುಕಿಕೊಂಡು ಬರುತ್ತಾರೆ ಎನ್ನುತ್ತಾರೆ ಅನುಪ್.


ಬಹುಮಾನದ ಹಣ ಇನ್ನೂ ಕೈಸೇರಿಲ್ಲ ಎಂದು ಹೇಳಿದರೂ ಯಾರೂ ನಂಬುವುದಿಲ್ಲ. ತನ್ನ ಬಗ್ಗೆ ಮಾಧ್ಯಮಗಳು ಸಾಕಷ್ಟು ಸುದ್ದಿ ಹಬ್ಬಿಸಿರುವುದರಿಂದ ಎಲ್ಲಿಗೂ ಹೋಗಲೂ ಸಾಧ್ಯವಾಗುತ್ತಿಲ್ಲ. ಈಗ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.


0 تعليقات

إرسال تعليق

Post a Comment (0)

أحدث أقدم