ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಗೋಮಾಂಸ ಸಾಗಾಟ; 150ಕೆ.ಜಿ ಗೋ ಮಾಂಸ ಪತ್ತೆ, ಓರ್ವ ಬಂಧನ,ಇನ್ನೋರ್ವ ಪರಾರಿ

ಗೋಮಾಂಸ ಸಾಗಾಟ; 150ಕೆ.ಜಿ ಗೋ ಮಾಂಸ ಪತ್ತೆ, ಓರ್ವ ಬಂಧನ,ಇನ್ನೋರ್ವ ಪರಾರಿ

 


ಬೈಂದೂರು : ಕುಂದಾಪುರದಿಂದ ಭಟ್ಕಳಕ್ಕೆ ಗೋಮಾಂಸ ಸಾಗಾಟ ಮಾಡುತ್ತಿದ್ದ ನ್ಯಾನೋ ಕಾರನ್ನು ತಡೆದು ನಿಲ್ಲಿಸಿದ ಬೈಂದೂರು ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು, ಇನ್ನೋರ್ವ ಕಾರಿನಿಂದ ಇಳಿದು ಪರಾರಿಯಾಗಿರುವ ಘಟನೆ ಆ. 20ರಂದು ಬೈಂದೂರು ತಾಲೂಕಿನ ಯಡ್ತರೆ ಗ್ರಾಮದ ಹೊಸ ಬಸ್‌ ನಿಲ್ದಾಣದ ಬಳಿ ನಡೆದಿದೆ.


ಭಟ್ಕಳ ನಿವಾಸಿ 37ವರ್ಷದ ಮಹಮ್ಮದ್‌ ಗೌಸ್‌ ಗವಾಯಿ ಬಂಧಿತ ಆರೋಪಿ. ಪರಾರಿಯಾದ ಆರೋಪಿಯನ್ನು ನಜ್ಮುಲ್‌ ಎಂದು ತಿಳಿದು ಬಂದಿದೆ. 


ಕಾರಿನಲ್ಲಿ ಸುಮಾರು 22ಸಾವಿರ ರೂ ಮೌಲ್ಯದ 150 ಕೆ.ಜಿ ಗೋ ಮಾಂಸ ಪತ್ತೆಯಾಗಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

0 تعليقات

إرسال تعليق

Post a Comment (0)

أحدث أقدم