ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಉಡುಪಿ; ಸಮುದ್ರ ಮಧ್ಯೆ ಬೋಟ್ ಮುಳುಗಿ, 60 ಲಕ್ಷ ರೂ. ನಷ್ಟ

ಉಡುಪಿ; ಸಮುದ್ರ ಮಧ್ಯೆ ಬೋಟ್ ಮುಳುಗಿ, 60 ಲಕ್ಷ ರೂ. ನಷ್ಟ

 


ಉಡುಪಿ: ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ ಬೋಟ್ ಮಂಗಳೂರು ಸಮೀಪದ ಸಮುದ್ರ ಮಧ್ಯೆ ಮುಳುಗಡೆಯಾಗಿದ್ದು, ಬೋಟ್‌ನಲ್ಲಿದ್ದ 10 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ. ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಮಲ್ಪೆಯ ಮಹೇಶ್ ಕುಂದರ್ ಅವರಿಗೆ ಸೇರಿದ ಮಕರ ಧ್ವಜ ಆಳಸಮುದ್ರ ಬೋಟ್ ಮಂಗಳೂರು ಸಮೀಪ ಮೀನುಗಾರಿಕೆ ಮಾಡುತ್ತಿರುವಾಗ ಮುಳುಗಡೆಗೊಂಡಿತ್ತು.


ಜೋರಾದ ಗಾಳಿ ಮಳೆಗೆ ಬೋಟ್‌ನ ಎಂಜಿನ್ ರೂಮಿಗೆ ನೀರು ತುಂಬಿ ಎಂಜಿನ್ ಕೆಟ್ಟು ಹೋದ ಪರಿಣಾಮ ಬೋಟ್ ಸಂಪೂರ್ಣ ಮುಳುಗಡೆಯಾಗಿತ್ತು. 


ಬೋಟ್‌ನಲ್ಲಿದ್ದ ಮೀನುಗಾರರನ್ನು ಸಮೀಪದಲ್ಲಿದ್ದ ಬೋಟ್‌ನವರು ರಕ್ಷಿಸಿದ್ದಾರೆ. ಹಿಡಿದ ಮೀನು, ಬಲೆ, ಎಂಜಿನ್ ಸೇರಿ ಸುಮಾರು 60 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

0 تعليقات

إرسال تعليق

Post a Comment (0)

أحدث أقدم