ಉಜಿರೆ: ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನಗೊಂಡಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಗೆ ಧರ್ಮಸ್ಥಳದಲ್ಲಿ ಭಾನುವಾರ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದರು.
ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್, ಗೌರವ ಕಾರ್ಯದರ್ಶಿ ವಿನಯ ಆಚಾರ್, ಗೌರವ ಕೋಶಾಧ್ಯಕ್ಷ ಬಿ. ಐತಪ್ಪ ನಾಯ್ಕ, ತಾಲ್ಲೂಕು ಘಟಕದ ಅಧ್ಯಕ್ಷರುಗಳಾದ ಮಂಜುನಾಥ ರೇವಣ್‍ಕರ್ (ಮಂಗಳೂರು) ವೇಣೂಗೋಪಾಲ ಶೆಟ್ಟಿ (ಮೂಡಬಿದ್ರೆ) ಸೇಸಪ್ಪ ರೈ (ಕಡಬ) ಚಂದ್ರಶೇಖರ ಪೆರಾಲ್ (ಸುಳ್ಯ) ಡಾ. ಯದುಪತಿ ಗೌಡ (ಬೆಳ್ತಂಗಡಿ) ಮತ್ತು ಜಿಲ್ಲಾ ಸಮಿತಿ ಸದಸ್ಯರಾದ ಅರುಣಾ, ತೇಜಸ್ವಿ ಅಂಬೆಕಲ್ಲು, ರಾಮಚಂದ್ರ ಪಳ್ಳತ್ತಡ್ಕ, ಪೂವಪ್ಪ ನೇರಳಕಟ್ಟೆ ಮತ್ತು ಮನಮೋಹನ ಪುತ್ತೂರು ಉಪಸ್ಥಿತರಿದ್ದರು.
إرسال تعليق