ಮಂಗಳೂರು : ಚಾರ್ಜಿಂಗ್ ಗೆ ಇಟ್ಟಿದ್ದ ಎರಡು ಇಲೆಕ್ಟ್ರಿಕ್ ಸ್ಕೂಟರ್ ಗಳು ಬೆಂಕಿಗೆ ಆಹುತಿಯಾದ ಘಟನೆಯೊಂದು ನಗರದ ಬೋಳೂರಿನ ಅಯ್ಯಪ್ಪ ದೇವಸ್ಥಾನದ ಬಳಿ ನಡೆದಿದೆ.
ಹಾಲಿನ ವ್ಯಾಪಾರಿ ಹರೇಕೃಷ್ಣ ಅವರಿಗೆ ಸೇರಿದ ನಾಲ್ಕು ಸ್ಕೂಟರ್‌ಗಳನ್ನು ಬೋಳೂರಿನ ಹಾಲಿನ ಬೂತ್ ಬಳಿ ಶನಿವಾರ ಬೆಳಗ್ಗೆ 10.30ಕ್ಕೆ ಚಾರ್ಜ್‌ಗೆ ಇಡಲಾಗಿತ್ತು ಎನ್ನಲಾಗಿದೆ.
ಮಧ್ಯಾಹ್ನದ ವೇಳೆ ಸ್ಕೂಟರ್‌ಗೆ ಬೆಂಕಿ ಹತ್ತಿಕೊಂಡಿದೆ. ಇದರಿಂದ ಸುಮಾರು 4 ಲಕ್ಷ.ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಈ ಘಟನೆಯಲ್ಲಿ 2 ಸ್ಕೂಟರ್‌ಗಳು ಸಂಪೂರ್ಣವಾಗಿ ಸುಟ್ಟು ಹೋಗಿವೆ. ಅಲ್ಲದೆ ಮತ್ತೆರಡು ಸ್ಕೂಟರ್‌ಗಳಿಗೆ ಭಾಗಶಃ ಹಾನಿಯಾಗಿದೆ.
إرسال تعليق