ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸುಳ್ಯದ ಚಂದನ ಸಾಹಿತ್ಯ ವೇದಿಕೆ ವತಿಯಿಂದ ಆಟಿ ಸಾಹಿತ್ಯ ಸಂಭ್ರಮ

ಸುಳ್ಯದ ಚಂದನ ಸಾಹಿತ್ಯ ವೇದಿಕೆ ವತಿಯಿಂದ ಆಟಿ ಸಾಹಿತ್ಯ ಸಂಭ್ರಮ

ಸುಳ್ಯ: ಸುಳ್ಯದ ಚಂದನ ಸಾಹಿತ್ಯ ವೇದಿಕೆ ವತಿಯಿಂದ ಆಟಿ ಹಬ್ಬದ ಪ್ರಯುಕ್ತ ಆಟಿ ಸಾಹಿತ್ಯ ಸಂಭ್ರಮ  ಕಾರ್ಯಕ್ರಮವು ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ನ ಸಭಾಂಗಣದಲ್ಲಿ ಜರುಗಿತು. ಸರಕಾರಿ ಸೇವೆಯಿಂದ ನಿವೃತ್ತಿಗೊಂಡ ಕೃಷಿ ಇಲಾಖೆಯ ತಾಂತ್ರಿಕ ಕೃಷಿ ಅಧಿಕಾರಿಗಳಾಗಿರುವ ಮೋಹನ್ ನನಗಾರು ಅವರಿಗೆ ವಿಶೇಷ ಸನ್ಮಾನ ಕಾರ್ಯಕ್ರಮ ಕೂಡ ನಡೆಯಿತು. ಇದೇ ವೇದಿಕೆಯಲ್ಲಿ ಆಟಿ ಕವಿಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮವನ್ನು ಭಾರತೀಯ ಜೀವವಿಮಾ ಪ್ರತಿನಿಧಿಗಳ ಸಂಘಟನೆಯ ಅಧ್ಯಕ್ಷರಾದ ಶಂಕರಲಿಂಗಂ ಕೆ ತೊಡಿಕಾನ ಅವರು ಉದ್ಘಾಟನೆ ಮಾಡಿದರು.


ಅಧ್ಯಕ್ಷತೆಯನ್ನು ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷ ಎಚ್. ಭೀಮರಾವ್ ವಾಷ್ಠರ್ ರವರು ವಹಿಸಿದ್ದರು. ಸುಳ್ಯ ಘಟಕದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕರಾದ ರಾಜಯೋಗಿನಿ ಬಿ ಕೆ ಉಮಾದೇವಿ ಅವರು ಸಾಧಕರಾದ ಸಾಹಿತಿ ನಾರಾಯಣ್ ನಾಯ್ಕ ಕುದುಕೋಳಿ, ಸಾರಿಗೆ ಸಹ ಸಂಚಾಲಕರಾದ ಗೋಪಾಲ್ ಈಶ್ವರಡ್ಕ, ಬಹುಮುಖ ಪ್ರತಿಭೆ ಧನ್ವಿ ರೈ ಪಾಣಾಜೆ ಹಾಗೂ ಮಹಿಳಾ ಕವಯಿತ್ರಿಯಾದ ವಿಂಧ್ಯಾ ಎಸ್ ರೈ ಅವರಿಗೆ ರಾಜ್ಯಮಟ್ಟದ ವಿವಿಧ ಪ್ರಶಸ್ತಿಗಳನ್ನು ನೀಡಿ ಗೌರವಿಸಿದರು. ಹಿರಿಯ ಜೆಸಿಗಳ ಸಂಘದ ಅಧ್ಯಕ್ಷರಾದ ಜೇಸಿ ಪಿ ಎಸ್ ಗಂಗಾಧರ್ ರವರು ಮುಖ್ಯ ಅತಿಥಿಗಳಾಗಿದ್ದರು.


ಸಭಾ ಕಾರ್ಯಕ್ರಮದ ಬಳಿಕ ನಡೆದ ಕವಿಗೋಷ್ಠಿ ಅಧ್ಯಕ್ಷತೆಯನ್ನು ಕಾಸರಗೋಡಿನ ಖ್ಯಾತ ಯುವ ಕವಯಿತ್ರಿ ಲತಾ ಆಚಾರ್ಯ ಬನಾರಿ ಅವರು ವಹಿಸಿದ್ದರು. ಕವಿಗೋಷ್ಠಿಯಲ್ಲಿ ಭಾಗವಹಿಸಿದ ಮತ್ತು ಸಾಸ್ಕೃತಿಕ  ಕಾರ್ಯಕ್ರಮದಲ್ಲಿ  ಭಾಗವಹಿಸಿದ ಎಲ್ಲರಿಗೂ ಅಭಿನಂದನಾ ಪತ್ರಗಳನ್ನು ಮತ್ತು ನೆನಪಿನ ಕಾಣಿಕೆ ನೀಡಿ ಸತ್ಕರಿಸಲಾಯಿತು. ಯುವ ಗಾಯಕ ಗಣೇಶ್ ಗಣಿ ಮಾವಿನಕಟ್ಟೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರಾರ್ಥನಾ ಗೀತೆಯನ್ನು ಗಣೇಶ್ ಆಚಾರ್ಯ ಬಿ ಎಸ್ ಅವರು ಹಾಡಿದರು. ಸ್ವಾಗತ ಭಾಷಣವನ್ನು ಸಂಮ್ಯಕ್ತ್  ಜೈನ್ ಕಡಬ ಅವರು ಮಾಡಿದರು. ಕಾರ್ಯಕ್ರಮ ನಿರೂಪಣೆಯನ್ನು ಖ್ಯಾತ ಕವಯಿತ್ರಿ ಸಾನು ಉಬರಡ್ಕ ಮತ್ತು ಸುಮಂಗಲಾ ಲಕ್ಷ್ಮಣ್ ಕೋಳಿವಾಡ ಅವರು ಮಾಡಿದರು. ವಂದನಾರ್ಪಣೆಯನ್ನು ಪೂರ್ಣಿಮಾ ಪೆರ್ಲಂಪಾಡಿ  ರವರು ಮಾಡಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


0 Comments

Post a Comment

Post a Comment (0)

Previous Post Next Post