ಕೇಂದ್ರ ಪಶುಸಂಗೋಪನೆ ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವ ಪುರುಷೋತ್ತಮ್ ರೂಪಲಾ ಅವರಿಂದ ದೇಶಾರ್ಪಣೆ
ಮೈಸೂರು: ಮೈಸೂರಿನ ಡಾ ಎಸ್.ಕೆ. ಮಿತ್ತಲ್ ಬರೆದಿರುವ “ಗೌರಾಷ್ಟ್ರ” ಪುಸ್ತಕವನ್ನು ಕೇಂದ್ರ ಪಶುಸಂಗೋಪನೆ ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವ ಪುರಶೋತಮ್ ರೂಪಲಾ ಅವರು ನವದೆಹಲಿಯಲ್ಲಿ ಬಿಡುಗಡೆ ಮಾಡಿದರು.
ನವದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾ ಸಭಾಂಗಣದಲ್ಲಿ ಜರುಗಿದ ಸಮಾರಂಭದಲ್ಲಿ ದೇಶದಾದ್ಯಂತ ವಿವಿಧಡೆಗಳಿಂದ ಬಂದ ಗೋ ಪ್ರೇಮಿಗಳು ಕಿಕ್ಕಿರಿದು ತುಂಬಿದ್ದರು. ದೀಪ ಬೆಳಗಿಸಿದ ಕೇಂದ್ರ ಪಶುಸಂಗೋಪನೆ ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವ ಪುರಶೋತಮ್ ರೂಪಲಾ ಅವರು ನಂತರ ಸಭೆಯನ್ನುದ್ದೇಶಿಸಿ ಮಾತನಾಡಿ, ಮೈಸೂರಿನ ಡಾ. ಶ್ರೀಕೃಷ್ಣ ಮಿತ್ತಲ್ ಅವರ ಗೋಸೇವಾ ಕಾರ್ಯಗಳನ್ನು ಶ್ಲಾಘಿಸಿದರು. ಜನ ಜಾಗೃತಿ ಮೂಡಿಸುವಲ್ಲಿಈ ಪುಸ್ತಕವು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.
“ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗೋ ಆಧಾರಿತ ಗ್ರಾಮೀಣ ಜೀವನಶೈಲಿಯಲ್ಲಿ ನವಭಾರತದ ಸಂಕಲ್ಪಕ್ಕೆ ಪ್ರೋತ್ಸಾಹ ನೀಡಿದ್ದಾರೆ. 75 ನೇ ಸ್ವಾತಂತ್ರ್ಯದ ಹಾಗೂ ಅಮೃತ್ ಕಾಲ್ ಯೋಜನೆಗಳ ಮೂಲಕ ರಾಷ್ಟ್ರವು ಮುನ್ನುಗ್ಗುತ್ತಿದೆ. ದೇಶವು ಇಂದು ಗೋ ಆಧಾರಿತವಾಗಿ ಸಾಗುವತ್ತ ಹೆಚ್ಚು ಹೆಚ್ಚು ಒಲವು ತೋರುತ್ತಿದೆ. ಡಾ. ಎಸ್.ಕೆ ಮಿತ್ತಲ್ ಅವರು ಬರೆದ ಗೋ ಸಂಪತ್ತಿನ ಎಲ್ಲಾ ಅಂಶಗಳ ಕುರಿತಾದ ಸಂಗ್ರಾಹ್ಯ ಪುಸ್ತಕವಾದ ಈ “ಗೌರಾಷ್ಟ್ರ (GOU RASHTRA)” ವನ್ನು ದೇಶದಾದ್ಯಂತ ದೊಡ್ಡ ಸಂಖ್ಯೆಯ ಪ್ರಾಣಿ ಪ್ರೇಮಿಗಳು ತಮ್ಮ ಎರಡೂ ಕೈಗಳಿಂದ ಸ್ವೀಕರಿಸುತ್ತಾರೆ. ಗೋವಿನ ಸಂಪನ್ಮೂಲದ ಸಂಗ್ರಾಹ್ಯ ಗ್ರಂಥವಿದು” ಎಂದು ಕೇಂದ್ರ ಪಶುಸಂಗೋಪನೆ ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವ ಶ್ರೀ ಪುರಶೋತಮ್ ರೂಪಲಾ ಅವರು ಹೇಳಿದರು.
ದೆಹಲಿ ಎನ್.ಸಿ.ಪಿ ಅಧ್ಯಕ್ಷ ಮತ್ತು ಮಾಜಿ ದೆಹಲಿ ಅಸೆಂಬ್ಲಿ ಸ್ಪೀಕರ್ ಯೋಗಾನಂದ ಶಾಸ್ತ್ರಿ ಅವರು ಸಭಿಕರನ್ನು ಉದ್ದೇಶಿಸಿ ಮಾತನಾಡಿ, “ಪ್ರಾಚೀನ ಕಾಲದಿಂದಲೂ ಹಸುವಿನ ಸಂತತಿಯ ಮೌಲ್ಯದೊಂದಿಗೆ ಭಾರತೀಯರು ನೋಡಿದ್ದಾರೆ” ಎಂದು ಹೇಳಿದರಲ್ಲದೆ, ಇಂತಹ ಮಾಹಿತಿಪೂರ್ಣ ಸಂಗ್ರಾಹ್ಯ ಪುಸ್ತಕವನ್ನು ಬರೆದ ಮೈಸೂರಿನ ಡಾ ಶ್ರೀಕೃಷ್ಣ ಮಿತ್ತಲ್ ಅವರನ್ನು ಅಭಿನಂದಿಸಿದರು.
ಆರ್.ಎಸ್.ಎಸ್. ಅಖಿಲ ಭಾರತೀಯ ಗೋಸೇವಾ ಪ್ರಮುಖ್ ಅಜಿತ್ ಮಹಾಪಾತ್ರ ಜೀ ಅವರು ಮುಖ್ಯ ಭಾಷಣಕಾರರಾಗಿ ಮಾತನಾಡುತ್ತಾ, ಗೋವಿನ ಕುರಿತು ಡಾ.ಎಸ್.ಕೆ.ಮಿತ್ತಲ್ ಅವರ ಅಪಾರ ಜ್ಞಾನ ಮತ್ತು ಅನುಭವವನ್ನು ಶ್ಲಾಘಿಸಿ, ಸಾರ್ವಜನಿಕ ಜಾಗೃತಿಗಾಗಿ ಪುಸ್ತಕ ಗೌರಾಷ್ಟ್ರದಲ್ಲಿ ಉಲ್ಲೇಖಿತವಾದ ವಿವಿಧ ಸನ್ನಿವೇಶ, ಸಾರ್ವಜನಿಕ ಆರೋಗ್ಯಕ್ಕೆ ಅಪಾಯದ ಸನ್ನಿವೇಶಗಳ ಕುರಿತು ವಿವರಿಸಿದರು, ಹಾಗೂ ಹಸುವಿನ ಸಂತತಿಯನ್ನು ಉಳಿಸುವ ಕೆಲಸ ಕುರಿತು ಎಲ್ಲರಿಗೂ ಕರೆ ನೀಡಿದರು.
ಮೀರತ್-ಹಾಪುರ ಸಂಸದ ರಾಜಿಂದರ್ ಅಗರ್ವಾಲ್, ನಿವೃತ್ತ ಐಎಎಸ್ ಅಧಿಕಾರಿ ಕಮಲ್ ತೌವರಿ, ಉತ್ತರ ಪ್ರದೇಶದ ವ್ಯಾಪಾರಿ ಮಂಡಲ್ ಅಧ್ಯಕ್ಷ ರವಿಕಾಂತ್ ಗಾರ್ಗ್, ಎ.ಎ.ಪಿ ನಾಯಕ ರಾಕೇಶ್ ಗೋಯಲ್, ಕೇಂದ್ರ ಖಾದಿ ಗ್ರಾಮೋದ್ಯೋಗ ನಿಗಮದ ಮಾಜಿ ಅಧ್ಯಕ್ಷ ಮತ್ತು ಆರ್.ಬಿ.ಐ. ಸದಸ್ಯ ಯಶಪಾಲ್ ಸಿಂಗ್, ರಾಷ್ಟ್ರೀಯ ಗೋಧನ್ ಮಹಾಸಂಘದ ಸಂಚಾಲಕ ವಿಜಯ್ ಖುರಾನಾ, ಸಂಸ್ಕೃತ ವಿಶ್ವವಿದ್ಯಾಲಯದ ಡೀನ್ ರಜನೀಶ್ ತ್ಯಾಗಿ, ಧುರ್ವ್ ಫೌಂಡೇಶನ್ನ ಧುರುವ್ ಅಗರ್ವಾಲ್ ಮತ್ತು ಪ್ರಾಣಿ ಪ್ರೇಮಿಗಳ ತಾರಾಗಣ ಉಪಸ್ಥಿತರಿದ್ದರು. ಗೋವಿನ ಮೇಲಿನ ಪ್ರೀತಿಯಿಂದ ಸಮಾರಂಭದಲ್ಲಿ ಭಾಗವಹಿಸಿದ ಎಲ್ಲರಿಗೂ ಡಾ ಎಸ್.ಕೆ. ಮಿತ್ತಲ್ ಅವರು ಧನ್ಯವಾದಗಳನ್ನು ಅರ್ಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
Post a Comment