ಸುಳ್ಯ: ಸುಳ್ಯದ ಚಂದನ ಸಾಹಿತ್ಯ ವೇದಿಕೆ ಆಯೋಜಿಸಿದ್ದ ಚುಟುಕು ವಾಚನ ಸ್ಪರ್ಧೆಯು ಇತ್ತೀಚಿಗೆ ಅರ್ಥಪೂರ್ಣವಾಗಿ ಜರುಗಿತು.
ಕವಿಗೋಷ್ಠಿ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳಾದ ಹಾ ಮ ಸತೀಶ್ ಬೆಂಗಳೂರು ರವರು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಮಹಿಳಾ ಸಾಹಿತಿಗಳಾದ ಸಾನು (ಸಂಧ್ಯಾ) ಉಬರಡ್ಕ ಸುಳ್ಯ ರವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿಗಳಲ್ಲಿ ಒಬ್ಬರಾದ ಕೆವಿಜಿ ಪಾಲಿಟೆಕ್ಣಿಕ್ ಕಾಲೇಜಿನ ಉಪನ್ಯಾಸಕರಾದ ವಿಜಯಕುಮಾರ್ ಕಾಣಿಚಾರ್, ಸುಳ್ಯದ ಮಹಿಳಾ ಸಾಹಿತಿ ಅನುರಾಧಾ ಶಿವಪ್ರಕಾಶ ರವರು ವಹಿಸಿದ್ದರು.
ಪ್ರಾಸ್ತಾವಿಕ ಭಾಷಣವನ್ನು ಚಂದನ ಸಾಹಿತ್ಯ ವೇದಿಕೆ ಸುಳ್ಯ ಇದರ ಅಧ್ಯಕ್ಷರಾದ ಎಚ್. ಭೀಮರಾವ್ ವಾಷ್ಠರ್ ಸುಳ್ಯ ರವರು ಮಾಡಿದರು. ಕುಮಾರಿ ಧನ್ವಿ ರೈ ಪಾಣಾಜೆ ಪ್ರಾರ್ಥನೆ ಗೀತೆ ಹಾಡಿದರು. ಯುವ ಕವಯಿತ್ರಿ ಶಶಿಕಲಾ ಭಾಕ್ರಬೈಲ್ ರಸ್ವಾಗತಿಸಿದರು. ಖ್ಯಾತ ಬರಹಗಾರರಾದ ಅಬೂಬಕರ್ ಅನಿಲಕಟ್ಟೆ ವಿಟ್ಲ ರವರು ವಂದಿಸಿದರು.
ಚುಟುಕು ವಾಚನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನಕ್ಕೆ ಸಿಂಧು ಭಾರ್ಗವ ಬೆಂಗಳೂರು ಆಯ್ಕೆ ಆದರು. ದ್ವಿತೀಯ ಬಹುಮಾನಕ್ಕೆ ಹಿತೇಶ್ ಕುಮಾರ್ ಎ ಕಾಸರಗೋಡು ಆಯ್ಕೆಯಾದರು. ತೃತೀಯ ಬಹುಮಾನಕ್ಕೆ ಪರಿಮಳ ಐವರ್ನಾಡು ಸುಳ್ಯ, ಎಂ ಎ ಮುಸ್ತಫಾ ಬೆಳ್ಳಾರೆ ಆಯ್ಕೆಯಾದರು. ಸಮಾಧಾನಕರ ಬಹುಮಾನಗಳಿಗೆ ಶ್ರೀಮತಿ ಸುಕೃತಿ ಅನಿಲ್ ಪೂಜಾರಿ (ಅನಿಕೃತಿ), ಪೂರ್ಣಿಮಾ ಪೆರ್ಲಂಪಾಡಿ ಪುತ್ತೂರು ಆಯ್ಕೆ ಆದರು.
ಚಂದನ ಸಾಹಿತ್ಯ ವೇದಿಕೆಯಲ್ಲಿ ನಡೆಯುತ್ತಿರುವ ಚುಟುಕು ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯದ ಬೇರೆ ಬೇರೆ ಕಡೆಯಿಂದ 40 ಕ್ಕೂ ಅಧಿಕ ಕವಿಗಳು ಭಾಗವಹಿಸಿದ್ದು ವಿಶೇಷ. ಚುಟುಕು ವಾಚನ ಸ್ಪರ್ಧೆಯಲ್ಲಿ ಕೆ. ಶಶಿಕಲಾ ಭಾಸ್ಕರ್ ದೈಲಾ ಬಾಕ್ರಬೈಲ್ ಕಾಸರಗೋಡು, ಬಿ.ಉದನೇಶ್ವರ್ ಪ್ರಸಾದ್ ಮೂಲಡ್ಕ ಕಾಸರಗೋಡು, ಎಮ್ ಎಸ್ ಉಷಾ ಪ್ರಕಾಶ್ ಮೈಸೂರು, ಪೂರ್ಣಿಮಾ ಕಾರಿಂಜ ಕನಕಮಜಲು, ಬಲ್ಲೇನಹಳ್ಳಿ ಮಂಜುನಾಥ ಕೆ ಆರ್ ಪೇಟೆ, ಅಪ್ಪಯ್ಯ ಯು ಯಾದವ್ ಬೆಂಗಳೂರು, ರತ್ನತನಯ {ನುಗ್ಗಿಹಳ್ಳಿ} ಬೆಂಗಳೂರು, ಶಿವಕುಮಾರ್ ಕೋಡಿಹಾಳ, ನಿರ್ಮಲಾ ಪುತ್ತೂರು, ಡಾ. ಸುರೇಶ ನೆಗಳಗುಳಿ ಮಂಗಳೂರು, ನಾರಾಯಣ್ ನಾಯ್ಕ. ಕುದುಕೋಳಿ, ಶಶಿಧರ್ ಏಮಾಜೆ, ಪೂರ್ಣಿಮಾ ಪೆರ್ಲಂಪಾಡಿ, ನಾರಾಯಣ್ ಕುಂಬ್ರ, ಶ್ರೀಮತಿ ರೇಖಾ ಸುದೇಶ್ ರಾವ್ ಮಂಗಳೂರು, ಮಾನಸ ವಿಜಯ್ ಕೈಂತಜೆ ಮಾಣಿ, ಜ್ಯೋತಿ ಲಕ್ಷ್ಮಿ ಕೂಟೇಲು, ಶ್ರೀಮತಿ ಪಿ ಹೆಗ್ಡೆ, ಡಾ.ವಾಣಿಶ್ರೀ ಕಾಸರಗೋಡು, ಡಾ.ಅನ್ನಪೂರ್ಣ ಹಿರೇಮಠ್, ಕುಸುಮ್ ಸಾಲಿಯಾನ್ ಪುಣೆ, ಆನಂದ್ ಹಕ್ಕೆನ್ನವರ, ರಾಜಶೇಖರ್ ಚ ಶೀಲವಂತ ಬೆಂಗಳೂರು, ಸಮ್ಯಕ್ತ್ ಜೈನ್ ಕಡಬ, ವರ್ಷಿಣಿ ರಾಮಚಂದ್ರ, ಶಂಕರಾಂಕ {ಶಂಕರಯ್ಯ ಕವಿತಾಳ}, ಭವಾನಿ ಗೌಡ ಹುಬ್ಬಳ್ಳಿ ಇನ್ನಿತರರು ಭಾಗವಹಿಸಿದ್ದರು.
Post a Comment