ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ರಕ್ಷಾಬಂಧನವೆಂಬ ಪವಿತ್ರ ಬೆಸುಗೆ

ರಕ್ಷಾಬಂಧನವೆಂಬ ಪವಿತ್ರ ಬೆಸುಗೆ


ರಕ್ಷಾಬಂಧನವೆಂಬುವುದು ಕೇವಲ ಒಂದು ದಾರವಲ್ಲ, ಒಡಹುಟ್ಟಿದವರ ನಡುವಿನ ಅವಿನಾಭಾವ ಬಂದಧ ಸಂಬಂಧವನ್ನು ಸೂಚಿಸುವ ಪವಿತ್ರ ದಾರ. ಅಣ್ಣ ತಂಗಿ ಜೀವನದ ನಡುವಿನ ಪರಸ್ಪರ ಬಾಂಧವ್ಯವನ್ನು ಬಲಪಡಿಸುವ ಹಬ್ಬವೆಂದರೆ ಅದು ರಕ್ಷಾ ಬಂಧನ. ರಕ್ಷೆ ಎಂಬುದು ಅಣ್ಣ ತಂಗಿಯ ಜೀವನದ ಒಂದು ಉತ್ತಮ ಪ್ರೀತಿಯ ಬೆಸುಗೆಯ ಸಂಕೇತವನ್ನು ಸೂಚಿಸುತ್ತದೆ.


ಈ ದಿನ ಸಹೋದರನ ಹಣೆಯ ಮೇಲೆ ಸಹೋದರಿ ತಿಲಕವನ್ನು ಹಚ್ಚಿ ತನ್ನನ್ನು ಸಮಾಜದ ಕೆಟ್ಟ ಕಣ್ಣುಗಳಿಂದ, ದುಷ್ಟಶಕ್ತಿಗಳಿಂದ ರಕ್ಷಿಸೆಂದು ಶುದ್ಧ ಮನಸ್ಸಿನಿಂದ, ಪ್ರೀತಿಯಿಂದ, ಸಹೋದರನ ಕೈಯಿಗೆ ರಕ್ಷಾಸೂತ್ರವನ್ನು ಕಟ್ಟಿ, ಆರತಿ ಮಾಡಿ ಸಹೋದರನ ಆಶೀರ್ವಾದವನ್ನು ಪಡೆದು, ಸಹೋದರನಿಂದ ಪ್ರೀತಿಯ ಉಡುಗೊರೆಯನ್ನು ಪಡೆಯುತ್ತಾಳೆ. ಈ ನಿಷ್ಕಲ್ಮಶ ಮನಸ್ಸಿನಿಂದ ಕಟ್ಟುವ ಒಂದೇ ಒಂದು ದಾರಕ್ಕೂ ವಿಶಿಷ್ಟವಾದ  ಅರ್ಥವಿರುವುದರಿಂದ ಇದು ಪರಸ್ಪರ ಭಾತೃತ್ವದ ಭಾವನೆಯನ್ನು ದಟ್ಟಗೊಳಿಸಿಸುತ್ತದೆ.


ರಾಖಿಹಬ್ಬ ಬೆಳೆದುಬಂದ ಹಿನ್ನಲೆ:

ಮಹಾಭಾರತ ಮಹಾಕಾವ್ಯದಲ್ಲಿ ಕೃಷ್ಣನ ಮಣಿಕಟ್ಟಿನಿಂದ ರಕ್ತಸ್ತ್ರಾವವಾಗುವುದನ್ನು ತಡೆಯಲು ದ್ರೌಪದಿ ತನ್ನ ಸೀರೆಯನ್ನು ಹರಿದು ಕೃಷ್ಣನ ಮಣಿಕಟ್ಟಿನ ರಕ್ತಸ್ತ್ರಾವವನ್ನು ತಡೆಹಿಡಿಯುವನಂತೆ ಕಟ್ಟಿದಳು. ಈ ವೇಳೆ ದ್ರೌಪದಿಯ ವಾತ್ಸಲ್ಯ, ಕಾಳಜಿಯನ್ನು ಕಂಡ ಕೃಷ್ಣ ಆಕೆಯನ್ನು ಸಹೋದರನ ಸ್ಥಾನದಲ್ಲಿ ನಿಂತು ರಕ್ಷಣೆ ಮಾಡುವ ಭರವಸೆ ನೀಡಿದನು.

          

-ಶಿಲ್ಪಾ ಜಯಾನಂದ್

ಪತ್ರಿಕೋದ್ಯಮ ವಿಭಾಗ

ವಿವೇಕಾನಂದ ಕಾಲೇಜ್, ಪುತ್ತೂರು


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

0 تعليقات

إرسال تعليق

Post a Comment (0)

أحدث أقدم