ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಇನ್ನಿಬ್ಬರು ಆರೋಪಿಗಳ ಬಂಧನ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಇನ್ನಿಬ್ಬರು ಆರೋಪಿಗಳ ಬಂಧನ


ಮಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರರಣಕ್ಕೆ ಸಂಬಂಧಿಸಿದಂತೆ ಇನ್ನಿಬ್ಬರು ಆರೋಪಿಗಳನ್ನು ಪೊಲೀಸರು ಇಂದು (ಆ.2)  ಬಂಧಿಸಿದ್ದಾರೆ. ಬೆಳ್ಳಾರೆಯ ಪಳ್ಳಿಮಜಲು ನಿವಾಸಿಗಳಾದ ಸದ್ದಾಂ (32) ಮತ್ತು ಹ್ಯಾರಿಸ್‌ (42) ಬಂಧಿತ ಆರೋಪಿಗಳು. 


ಈ ಪ್ರಕರಣದಲ್ಲಿ ಶಫೀಕ್ ಮತ್ತು ಝಾಕಿರ್‌ ಎಂಬ ಇಬ್ಬರು ಆರೋಪಿಗಳನ್ನು ಜುಲೈ 28ರಂದು ಬಂಧಿಸಲಾಗಿತ್ತು. ಇವರನ್ನು ವಶಕ್ಕೆ ಪಡೆದ ಬಳಿಕ ಪೊಲೀಸರು ವಿಚಾರಣೆ ನಡೆಸಿದಾಗ ಸದ್ದಾಂ ಮತ್ತು ಹ್ಯಾರಿಸ್‌ ತಲೆಮರೆಸಿಕೊಂಡಿರುವುದು ಗೊತ್ತಾಗಿತ್ತು.


ಇದುವರೆಗಿನ ತನಿಖೆಯಲ್ಲಿ ಪ್ರಕರಣದ ಶಂಕಿತ ಸಂಚಕೋರರು ಮತ್ತು ಹಂತಕರನ್ನು ತನಿಖಾ ತಂಡ  ಗುರುತಿಸಿದೆ. ತಲೆಮರೆಸಿಕೊಂಡಿರುವ ಇನ್ನಷ್ಟು ಆರೋಪಿಗಳ ಬಂಧನ್ಕಕೆ ಬಲೆ ಬೀಸಲಾಗಿದೆ ಎಂದು ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ ಅವರ ಪ್ರಕಟಣೆ ತಿಳಿಸಿದೆ.


web counter

0 تعليقات

إرسال تعليق

Post a Comment (0)

أحدث أقدم