ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹಿಂದೂಗಳ ಪವಿತ್ರ ಹಬ್ಬ ನಾಗರಪಂಚಮಿ; ಶ್ರಾವಣ ಮಾಸದ ಮೊದಲ ಹಬ್ಬ

ಹಿಂದೂಗಳ ಪವಿತ್ರ ಹಬ್ಬ ನಾಗರಪಂಚಮಿ; ಶ್ರಾವಣ ಮಾಸದ ಮೊದಲ ಹಬ್ಬ


ಹಿಂದೂ ಪಂಚಾಂಗದ ಪ್ರಕಾರ ಶ್ರಾವಣ ಮಾಸದಲ್ಲಿ ಮೊದಲು ಬರುವ ಹಬ್ಬ, ಭಯ ಭಕ್ತಿ ಶ್ರದ್ಧೆಯಿಂದ ಆಚರಿಸುವ ಹಬ್ಬ ನಾಗರ ಪಂಚಮಿ. ಶ್ರಾವಣ ಶುದ್ಧ ಪಂಚಮಿಯಿಂದ ಆಚರಿಸಲ್ಪಡುವ ಈ ಹಬ್ಬ ಗಣೇಶ ಚತುರ್ಥಿ, ಕೃಷ್ಣಾಷ್ಟಮಿ, ನವರಾತ್ರಿ, ಜಾತ್ರೆ ಎಲ್ಲಾ ಶುಭ ಆಚರಣೆಗಳಿಗೆ ಮೊದಲ ಮೆಟ್ಟಿಲು.


ನಾಗರ ಪಂಚಮಿ ದಿನ ವಿಶೇಷವಾಗಿ ಪ್ರಾತಃ ಕಾಲದಲ್ಲಿ ಪ್ರತಿಯೊಬ್ಬರು ಸ್ನಾನಾದಿ ನಿತ್ಯ ಕರ್ಮಗಳನ್ನು ಮುಗಿಸಿ ಮನೆಮಂದಿ, ಕುಟುಂಬದವರು ತಲ ತಲಾಂತರದಿಂದ ನಂಬಿಕೊಂಡು ಬಂದಿರುವ ನಾಗಬನದಲ್ಲಿ ನಾಗದೇವರಿಗೆ ಪ್ರಿಯವಾದ ಸಿಂಗಾರ, ಹೂವು, ಅಕ್ಕಿ, ಕಾಯಿ, ಬಾಳೆಹಣ್ಣುಗಳನ್ನು ಅರ್ಪಿಸಿ, ನಾಗದೇವರುಗಳಿಗೆ ಹಾಲೆರೆಯುವ ಮೂಲಕ ಅಭಿಷೇಕವನ್ನು ಮಾಡಿ ಭಕ್ತಿಯಿಂದ ಪೂಜಿಸಲಾಗುತ್ತದೆ.


ಹಿಂದೂ ಧರ್ಮಗಳ ಪ್ರಕಾರ ನಾಗ ದೇವರುಗಳು ಸಂತೋಷ, ಸಮೃದ್ಧಿ, ಅದೃಷ್ಟವನ್ನು ನೀಡುತ್ತದೆ ಎಂಬ ನಂಬಿಕೆಯಿದೆ. ಅನಂತ, ವಾಸುಕೀ, ಶೇಷ, ಪದ್ಮನಾಭ, ಕಂಬಲ, ಶಂಖಪಾಲ, ದೃತರಾಷ್ಟ್ರ, ತಕ್ಷಕ ಮತ್ತು ಕಾಲಿಯಾ ಹೀಗೆ ಒಂಬತ್ತು ಜಾತಿಯ ನಾಗಗಳ ಆರಾಧನೆಯನ್ನು ಮಾಡಲಾಗುತ್ತದೆ.


ವಿಶೇಷವಾಗಿ ಹೆಣ್ಣುಮಕ್ಕಳ ಹಬ್ಬ:

ನಾಗರ ಪಂಚಮಿ ಹೆಚ್ಚಾಗಿ ಹೆಣ್ಣುಮಕ್ಕಳ ಹಬ್ಬ, ನಾಗರ ಪಂಚಮಿಯ ಹಿಂದಿನ ದಿನ ಸಹೋದರಿ ನಾಗದೇವರಲ್ಲಿ ಬೇಡಿಕೊಂಡರೆ ಸಹೋದರನಿಗೆ ಲಾಭ ಹಾಗೂ ರಕ್ಷಣೆ ಸಿಗುತ್ತದೆ ಎಂಬ ನಂಬಿಕೆಯಿದೆ. ನಾಗರ ಪಂಚಮಿ ಬಂತು ಅಣ್ಣ ಬರುತ್ತಾನೆ ಕರೆಯಾಕ, ಕರಿ ಸೀರೆ ಉಡಿಸಾಕ ಎನ್ನುವ ಜಾನಪದ ಹಾಡಿನಂತೆ ಹಬ್ಬದ ವಿಶೇಷ ಸಾರುತ್ತದೆ.

-ಶಿಲ್ಪಾ ಜಯಾನಂದ್

ಪತ್ರಿಕೋದ್ಯಮ ವಿಭಾಗ

ವಿವೇಕಾನಂದ ಕಾಲೇಜ್, ಪುತ್ತೂರು


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

0 تعليقات

إرسال تعليق

Post a Comment (0)

أحدث أقدم