ಮಂಗಳೂರು: ಬೆಳ್ತಂಗಡಿಯ ಕನ್ಯಾಡಿ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯದ ಪರ್ವಕಾಲದಲ್ಲಿ ಕನ್ಯಾಡಿ ಶ್ರೀಗಳ ಪಾದಪೂಜೆಯನ್ನು ಮಂಗಳೂರು ನಗರ ಉತ್ತರ ಶಾಸಕರಾದ ಡಾ.ಭರತ್ ಶೆಟ್ಟಿಯವರು ನೆರವೇರಿಸಿ ಶ್ರೀಗಳ ಆರ್ಶೀವಾದವನ್ನು ಪಡೆದರು.
ಅದೇ ಸಂದರ್ಭದಲ್ಲಿ ಶಾಸಕರು ಕ್ಷೇತ್ರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿಗೆ ಪ್ರಾರ್ಥನೆ ಸಲ್ಲಿಸಿದರು.
ವಿಧಾನ ಪರಿಷತ್ ಸದಸ್ಯರಾದ ಮಾನ್ಯ ಪ್ರತಾಪ್ ಸಿಂಹ ನಾಯಕ್, ಭಾಜಪಾ ರಾಜ್ಯ ವಕ್ತಾರ ವಿಕಾಸ್ ಪುತ್ತೂರು, ಕಾರ್ಪೊರೇಟರ್ ಗಳಾದ ಜಯಾನಂದ ಅಂಚನ್, ಕಿರಣ್ ಕೋಡಿಕಲ್, ವರುಣ್ ಚೌಟ, ಮನೋಜ್ ಕುಮಾರ್, ಉತ್ತರ ಮಂಡಲ ಉಪಾಧ್ಯಕ್ಷ ವಿಠಲ್ ಸಾಲ್ಯಾನ್, ಯುವ ಮೋರ್ಚಾ ಜಿಲ್ಲಾ ಖಜಾಂಚಿ ರಕ್ಷಿತ್ ಪೂಜಾರಿ, ಮಂಡಲ ಖಜಾಂಚಿ ಪುಷ್ಪರಾಜ್ ಮುಕ್ಕ, ಉತ್ತರ ಮಂಡಲ ಯುವ ಮೋರ್ಚಾ ಅಧ್ಯಕ್ಷ ಭರತ್ ರಾಜ್ ಕೃಷ್ಣಾಪುರ, ಯುವ ಮೋರ್ಚಾ ಉಪಾಧ್ಯಕ್ಷ ವಿವೇಕ್, ಶಿವಪ್ರಸಾದ್, ಮೋಕ್ಷಿತ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
إرسال تعليق