ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸ್ವಾತಂತ್ರೋತ್ಸವವನ್ನು ಸಂಭ್ರಮಿಸೋಣ: ಡಾ. ಚೂಂತಾರು

ಸ್ವಾತಂತ್ರೋತ್ಸವವನ್ನು ಸಂಭ್ರಮಿಸೋಣ: ಡಾ. ಚೂಂತಾರು


ಮಂಗಳೂರು: ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಕೇಂದ್ರ ಸರಕಾರದ ಮಹತ್ವಕಾಂಕ್ಷೆ ಯೋಜನೆ 'ಆಜಾದೀ ಕಾ ಅಮೃತ ಮಹೋತ್ಸವ' ವನ್ನು ಸಂಭ್ರಮಿಸೋಣ, ಆದರೆ ಈ ಸಂಭ್ರಮದಲ್ಲಿ ನಮ್ಮ ಜವಾಬ್ದಾರಿಗಳನ್ನು ಮರೆಯದೇ ದೇಶಕ್ಕಾಗಿ ಮತ್ತಷ್ಟು ಹುಮ್ಮಸ್ಸಿನಿಂದ ನಮ್ಮನ್ನು ದೇಶ ಸೇವೆಗಾಗಿ ಸಮರ್ಪಿಸಿಕೊಳ್ಳೋಣ. ಸ್ವಾತಂತ್ರ್ಯಕ್ಕೂ ಸ್ವೇಚ್ಛಾಚಾರ ಕ್ಕೂ ಇರುವ ವ್ಯತ್ಯಾಸವನ್ನು ಅರಿತು ಮತ್ತಷ್ಟು ಸಾಮಾಜಿಕ ಬದ್ಧತೆ ಮತ್ತು ಸಿದ್ಧತೆಗಳೊಂದಿಗೆ ದೇಶಸೇವೆಗಾಗಿ ಟೊಂಕಕಟ್ಟೋಣ. ಇದುವೇ ನಾವು ತಾಯಿ ಭಾರತಾಂಬೆಗೆ ಸಲ್ಲಿಸುವ ಬಹುದೊಡ್ಡ ಗೌರವ ಎಂದು ದ. ಕ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ. ಮುರಲೀ ಮೋಹನ್ ಚೂಂತಾರು ನುಡಿದರು.


ರವಿವಾರದಂದು (ಆ.14) 'ಆಜಾದೀ ಕಾ ಅಮೃತ ಮಹೋತ್ಸವದ' ಅಂಗವಾಗಿ ರೋಟರಿ ಕ್ಲಬ್ ಹಿಲ್ ಸೈಡ್, ಮಂಗಳೂರು ಇದರ ವತಿಯಿಂದ ದ. ಕ ಜಿಲ್ಲಾ ಗೃಹರಕ್ಷಕದಳ ಕಚೇರಿಗೆ ಸ್ವಾತಂತ್ರೋತ್ಸವದ 75ನೇ ವರ್ಷದ ಸವಿ ನೆನಪಿಗಾಗಿ 75 ಹೂವಿನ ಕುಂಡಗಳನ್ನು ಕ್ಲಬಿನ ಅಧ್ಯಕ್ಷರಾದ ಶ್ರೀ ರೋಟರಿಯನ್ PHF ಶಾಮ್ ಲಾಲ್ ಅವರು ದ. ಕ ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅವರಿಗೆ ಹಸ್ತಾಂತರಿಸಿದರು.


ಶಾಮಲಾಲ್ ಎರ್ಮಲ್ ಮಾತನಾಡಿ ಗೃಹರಕ್ಷಕರ ಅತ್ಯಂತ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ದೇಶ ಕಟ್ಟುವ ಕೆಲಸವನ್ನು ಸದ್ದಿಲ್ಲದೆ ಮಾಡುತ್ತಿದ್ದಾರೆ. ದೇಶದೊಳಗಿನ ಆಸ್ತಿ ಪಾಸ್ತಿ ಮತ್ತು ಜನರ ರಕ್ಷಣೆಯಲ್ಲಿ ಅವರ ಪಾತ್ರ ಅತೀ ಹೆಚ್ಚು. ಒಂದರ್ಥದಲ್ಲಿ ಗೃಹರಕ್ಷಕರೇ ದೇಶದೊಳಗಿನ ಸೈನಿಕರು ಎಂದು ಅಭಿಪ್ರಾಯಪಟ್ಟರು.


ರೋಟರಿ ಕ್ಲಬ್ ಇದರ ಕಾರ್ಯದರ್ಶಿ ದಂತ ವೈದ್ಯ ಶ್ರೀ ಡಾ|| ರಾಹುಲ್ ಟಿ. ಜಿ, ಹಿಂದಿನ ಅಧ್ಯಕ್ಷರಾದ ಶ್ರೀ ರೋಟರಿಯನ್  ಪ್ರವೀಣ್ ಚಂದ್ರ ಶರ್ಮ, ಸಾರ್ಜೆಂಟ್ ಆಫ್ ಆರ್ಮಿ ಶ್ರೀ ರೋಟರಿಯನ್ SCS ವರ್ಮಾ, ಸದಸ್ಯರಾದ ರೋಟರಿಯನ್ ವಾಸುದೇವ ಶೆಟ್ಟಿಗಾರ್, ಶ್ರೀಮತಿ ವೀಣಾ ಶಾಮ್ ಲಾಲ್,, ಕಚೇರಿಯ ಅಧೀಕ್ಷಕ ಶ್ರೀ ರತ್ನಾಕರ, ಗೃಹರಕ್ಷಕರಾದ ಸುನಿಲ್, ದಿವಾಕರ್, ಕನಕಪ್ಪ, ಮಹೇಶ್, ಪ್ರಸಾದ್, ವಿನಯ್, ಪ್ರದೀಪ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 Comments

Post a Comment

Post a Comment (0)

Previous Post Next Post