ಬೆಂಗಳೂರು: ನಟ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಅವರ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ರವಿಚಂದ್ರನ್ ಅವರ ಹಿರಿಯ ಪುತ್ರ ವಿ. ಮನೋರಂಜನ್ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇಂದು ಬೆಳಿಗ್ಗೆ 8.30ರ ಶುಭ ಮುಹೂರ್ತದಲ್ಲಿ ಮಾಂಗಲ್ಯ ಧಾರಣೆ ಮಾಡುವ ಮೂಲಕ ಚೆನ್ನೈ ಮೂಲದ ವೈದ್ಯೆ ಸಂಗೀತ ಎಂಬವರನ್ನು ಮನೋರಂಜನ್ ವರಿಸಿದ್ದಾರೆ.
ಅರಮನೆಯ ಮೈದಾನದಲ್ಲಿ ವಿವಾಹ ಮಹೋತ್ಸವ ಬಹಳ ಅದ್ಧೂರಿಯಾಗಿ ನೆರವೇರಿದೆ. ನಿನ್ನೆ ನಡೆದ ಆರತಕ್ಷತೆಯಲ್ಲಿ ಚಿತ್ರರಂಗ ಮತ್ತು ರಾಜಕೀಯದ ಗಣ್ಯರು ಭಾಗವಹಿಸಿ, ನವಜೋಡಿಗೆ ಶುಭ ಹಾರೈಸಿದ್ದಾರೆ.
ಸಾಹೇಬ' ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿಕೊಟ್ಟ ರವಿಚಂದ್ರನ್ ಮತ್ತು ಸುಮತಿ ಅವರ ಮೊದಲ ಪುತ್ರ ಮನೋರಂಜನ್ ಇಂದು ಸ್ಟಾರ್ ನಟರಾಗಿದ್ದಾರೆ.
ಸಾಹೇಬ, ಮುಗಿಲುಪೇಟೆ, ಬೃಹಸ್ಪತಿ, ಪ್ರಾರಂಭ. ಸಿನಿಮಾಗಳಲ್ಲಿ ಮನೋರಂಜನ್ ನಟಿಸಿದ್ದಾರೆ. ರವಿಚಂದ್ರನ್ ಅವರಿಗೆ ಮೂವರು ಮಕ್ಕಳು.
2019ರಲ್ಲಿ ಮಗಳ ಮದುವೆಯನ್ನು ರವಿಚಂದ್ರನ್ ಅವರು ಅದ್ದೂರಿಯಾಗಿ ಮಾಡಿದ್ದರು. ಇದೀಗ ಮನೋರಂಜನ್ ಮದುವೆಯನ್ನು ತುಂಬಾ ಅದ್ಧೂರಿಯಾಗಿ ಮಾಡಿದ್ದಾರೆ.
Post a Comment