ರಾಯಚೂರು: ಇಂದಿನಿಂದ ಮಂತ್ರಾಲಯದಲ್ಲಿ ಶ್ರೀರಾಘವೇಂದ್ರ ತೀರ್ಥ ಗುರುಸಾರ್ವಭೌಮರ 351ನೇ ಆರಾಧನಾ ಮಹೋತ್ಸವ, ಮಳೆಯ ಆತಂಕದ ನಡುವೆ ಆರಂಭಗೊಂಡಿದೆ.
ಮಂತ್ರಾಲಯದಲ್ಲಿ ಇಂದಿನಿಂದ ಆರಂಭಗೊಳ್ಳುತ್ತಿರುವಂತ ಸಪ್ತರಾತ್ರೋತ್ಸವಕ್ಕೆ ದೇಶ, ವಿದೇಶಗಳಿಂದ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನಲೆ, ಸಕಲ ಸೌಲಭ್ಯದ ವ್ಯವಸ್ಥೆ ಕೂಡ ಮಾಡಲಾಗಿದೆ.
ಆಗಸ್ಟ್ 10ರ ಇಂದು ಸಂಜೆ 7ಕ್ಕೆ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಗಳು ಧ್ವಜಾರೋಹಣ, ಗೋ, ಧಾನ್ಯ ಪೂಜೆ ಸೇರಿ ವಿವಿಧ ಧಾರ್ಮಿಕ ವಿಧಿ-ವಿಧಾನದ ಮೂಲಕ ಇಂದಿನಿಂದ ಶ್ರೀರಾಯರ 351ನೇ ಆರಾಧನೆಯ ಸಪ್ತ ರಾತ್ರೋತ್ಸವಕ್ಕೆ ಚಾಲನೆ ದೊರೆಯಲಿದೆ.
إرسال تعليق