ಮಂಗಳೂರು: ಜಿಲ್ಲೆಗೆ ಭೇಟಿ ನೀಡುವ ಹೆಚ್ಚಿನ ಎಲ್ಲಾ ಪ್ರವಾಸಿಗರು ಮಂಗಳೂರಿನ ಪ್ರಸಿದ್ಧ ಬೀಚ್ ಗಳಾದ ಉಳ್ಳಾಲ, ಸೋಮೇಶ್ವರ, ತಣ್ಣೀರುಬಾವಿ, ಪಣಂಬೂರು ಬೀಚ್ ಗಳಿಗೆ ಭೇಟಿ ನೀಡುತ್ತಾರೆ. ಮಳೆಗಾಲದಲ್ಲಿ ಕಡಲಿನ ಅಬ್ಬರ ಜಾಸ್ತಿಯಾಗಿರುತ್ತದೆ ಮತ್ತು ಅಲೆಗಳ ಎತ್ತರ ಹಾಗೂ ಸೆಳೆತ ತುಂಬಾ ಅಪಾಯಕಾರಿಯಾಗಿರುತ್ತದೆ. ಇದರ ಅರಿವಿಲ್ಲದೆ ಪ್ರವಾಸಿಗರು ಕಡಲಿನ ತೀರದಲ್ಲಿ ನೀರಿಗೆ ಇಳಿದು ಅಪಾಯವನ್ನು ಮೈಗೆಳೆದುಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಬೀಚ್ ಗೆ ಬಂದ ಎಲ್ಲಾ ಪ್ರವಾಸಿಗರನ್ನು ಎಚ್ಚರಿಸಿ ಮನವೊಲಿಸಿ, ನೀರಿಗೆ ಇಳಿಯದಂತೆ ಮಾಡುವ ಗುರುತರ ಹೊಣೆಗಾರಿಕೆ ಬೀಚ್ ಗಳಲ್ಲಿ ಬೀಚ್ ಗಾರ್ಡ್ ಗಳಾಗಿ ಕರ್ತವ್ಯ ನಿರ್ವಹಿಸುವ ಗೃಹರಕ್ಷಕರಿಗೆ ಇದೆ. ಪ್ರವಾಸಿಗರ ರಕ್ಷಣೆಗೆ ಮೊದಲ ಆದ್ಯತೆ ನೀಡುತ್ತೇವೆ ಎಂದು ದ.ಕ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ. ಮುರಲೀ ಮೋಹನ್ ಚೂಂತಾರು ನುಡಿದರು.
ಬುಧವಾರದಂದು ಸಮಾದೇಷ್ಟರು ಸುರತ್ಕಲ್, ಸಸಿಹಿತ್ಲು, ಪಣಂಬೂರು, ತಣ್ಣೀರುಬಾವಿ ಬೀಚ್ ಗಳಿಗೆ ಭೇಟಿ ನೀಡಿ ಕಡಲಕೊರೆತದಿಂದ ಉಂಟಾದ ಹಾನಿಯನ್ನು ವೀಕ್ಷಿಸಿದರು ಮತ್ತು ಬೀಚ್ ಗಾರ್ಡ್ ಗಳಾಗಿ ಕೆಲಸ ನಿರ್ವಹಿಸುವ ಪ್ರವಾಹ ರಕ್ಷಣಾ ತಂಡದ ಗೃಹರಕ್ಷಕರನ್ನು ಭೇಟಿ ಮಾಡಿ ಅವನಿಗೆ ಸೂಚನೆ ಮತ್ತು ಮಾರ್ಗದರ್ಶನ ನೀಡಿದರು.
ಜಿಲ್ಲಾಧಿಕಾರಿ ಆದೇಶದಂತೆ ಈ ಗೃಹರಕ್ಷಕರು ದಿನದ ಎರಡು ಪಾಳಿಗಳಲ್ಲಿ ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ ಮಂಗಳೂರಿನ ಎಲ್ಲಾ 8 ಪ್ರಸಿದ್ಧ ಬೀಚ್ ಗಳಲ್ಲಿ ಜೂನ್ ತಿಂಗಳಿನಿಂದ ಆಗಸ್ಟ್ ತಿಂಗಳವರೆಗೆ ಕೆಲಸ ನಿರ್ವಹಸಲಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
إرسال تعليق