ಮೈಸೂರು: ಗ್ರಾಮ ಪಂಚಾಯತಿ ಸದಸ್ಯ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಘಟನೆಯೊಂದು ಮೈಸೂರಿನ ಆರ್.ಟಿ.ನಗರದ ಸುಭಿಕ್ಷ ಗಾರ್ಡನ್ಸ್ನಲ್ಲಿ ನಡೆದಿದೆ.
ಸತೀಶ್ (34) ಮೃತ ಗ್ರಾಮ ಪಂಚಾಯತಿ ಸದಸ್ಯ. ಕೆ.ಆರ್.ನಗರ ತಾಲೂಕಿನ ಹಳಿಯೂರು ಗ್ರಾಮ ಪಂಚಾಯತಿ ಅಧ್ಯಕ್ಷರ ಚುನಾವಣೆ ಹಿನ್ನೆಲೆ 11ಕ್ಕೂ ಹೆಚ್ಚು ಸದಸ್ಯರು ರೆಸಾರ್ಟ್‌ಗೆ ಬಂದಿದ್ದರು.
ಜವರೇಗೌಡ ಕೊಪ್ಪಲಿನ ನಿವಾಸಿಯಾಗಿರುವ ಸತೀಶ್ ಕೂಡ ರೆಸಾರ್ಟ್‌ಗೆ ಬಂದಿದ್ದರು. ಸತೀಶ್ ಕಾಂಗ್ರೆಸ್ ಪಕ್ಷ ಬೆಂಬಲದಿಂದ ಗೆದ್ದಿದ್ದರು.
ಜೆಡಿಎಸ್‌ನಿಂದ ಗೆದ್ದಿದ್ದ ದಿನೇಶ್ ಅಧ್ಯಕ್ಷರಾಗಲು 11 ಸದಸ್ಯರನ್ನು ಪ್ರವಾಸ ಕಳುಹಿಸಿದ್ದರು. ಈ ಸದಸ್ಯರು ಕಳೆದ 20 ದಿನಗಳಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಪ್ರವಾಸ ಹೋಗಿ ಬಂದಿದ್ದರು. ಸದ್ಯ 11 ಸದಸ್ಯರು ಮೈಸೂರಿನ ಆರ್.ಟಿ.ನಗರದ ಸುಭಿಕ್ಷ ಗಾರ್ಡನ್ಸ್ನಲ್ಲಿ ತಂಗಿದ್ದರು. ಇದೀಗ ಸತೀಶ್ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.
ತಂಗಿದ್ದ ರೂಮ್ನಲ್ಲಿಯೇ ಸತೀಶ್ ಮೃತದೇಹ ಬಿದ್ದಿದ್ದು, ಮೈಮೇಲೆ ಬಟ್ಟೆ ಇಲ್ಲದಾಗಿದೆ. ಮೃತದೇಹದ ಪಕ್ಕದಲ್ಲೇ ಮಲ, ಮೂತ್ರ ವಿಸರ್ಜನೆ ಮಾಡಿದ್ದು, ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
Post a Comment