ಮಂಗಳೂರು: ಪದವಿನಂಗಡಿ- ದೇವಿನಗರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ರಜತ ಮಹೋತ್ಸವದ ಅಂಗವಾಗಿ ಈ ಬಾರಿ 25ನೇ ಸಾರ್ವಜನಿಕ ಶ್ರೀ ಗಣೇಶೋತ್ಸವವು ಆಗಸ್ಟ್ 31ರಿಂದ ಸೆಪ್ಟೆಂಬರ್ 2ರ ವರೆಗೆ ಅದ್ದೂರಿಯಾಗಿ ನಡೆಯಲಿದೆ.
ಪದವಿನಂಗಡಿಯ ಶ್ರೀ ದುರ್ಗಾಕಟ್ಟೆ ಬಳಿಯಲ್ಲಿರುವ ಶ್ರೀ ಗಣೇಶ ಮಂಟಪದಲ್ಲಿ ಮೂರು ದಿನಗಳ ಉತ್ಸವ ನಡೆಯುತ್ತದೆ ಎಂದು ಸಮಿತಿಯ ಗೌರವಾಧ್ಯಕ್ಷ ಡಿ. ವಾಸುದೇವ ಕಾಮತ್, ಪದವಿನಂಗಡಿ ಮತ್ತು ಇತರ ಪದಾಧಿಕಾರಿಗಳಾದ ಗೌರವ ಸಲಹೆಗಾರರಾದ ಜಿ. ಪ್ರಶಾಂತ್ ಪೈ, ರವಿ ಪ್ರಸನ್ನ ಸಿ.ಕೆ, ಉಪಾಧ್ಯಕ್ಷರಾದ ನಾಗೇಶ್ ಕುಲಾಲ್, ಲೋಕನಾಥ್ ಮಾರ್ಲ, ಸಂದೀಪ್ ಬೋಂದೇಲ್, ವಿಠಲ ಪೂಜಾರಿ, ಗಂಗಾಧರ ಪಚ್ಚನಾಡಿ, ಪ್ರಧಾನ ಕಾರ್ಯದರ್ಶಿ ಉದಯಕುಮಾರ್ ಪಚ್ಚನಾಡಿ, ಜತೆ ಕಾರ್ಯದರ್ಶಿಗಳಾದ ನಂದಕಿಶೋರ್ ಎಂ, ಭಗವಾನ್ ಭಟ್ರಕುಮೇರ್, ಕೋಶಾಧಿಕಾರಿ ಪುರುಷೋತ್ತಮ ಬೋಂದೇಲ್, ಲೆಕ್ಕಪರಿಶೋಧಕರಾದ ಹರೀಶ್ ಕುಮಾರ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆ.30ರಂದು ಮಂಗಳವಾರ ಸಂಜೆ 5:30ಕ್ಕೆ ದಿ. ಮೋಹನ್ ರಾವ್ ಅವರ ಮಕ್ಕಳು, ಮಣ್ಣಗುಡ್ಡ ಇವರ ಮನೆಯಿಂದ ಮಹಾಗಣಪತಿ ದೇವರ ವಿಗ್ರಹವನ್ನು ಭವ್ಯ ಮೆರವಣಿಗೆಯ ಮೂಲಕ ಬೆನಕ ಸಭಾ ಭವನಕ್ಕೆ ಕರೆತಂದು ವಾಸ್ತುಹೋಮ ಮತ್ತು ವಾಸ್ತುಪೂಜೆ ನಡೆಯಲಿದೆ.
31ರಂದು ಬುಧವಾರ ಬೆಳಗ್ಗೆ ಶ್ರೀ ದೇವರ ವಿಗ್ರಹದ ಪ್ರತಿಷ್ಠಾಪನೆ ಹಾಗೂ ಧ್ವಜಾರೋಹಣ ನಡೆಯಲಿದ್ದು, ಬೆಳಗ್ಗೆ 9:30ರಿಂದ 24 ಕಾಯಿ ಗಣಹೋಮ ನೆರವೇರಲಿದೆ.
ಬಳಿಕ 10 ಗಂಟೆಯಿಂದ 12 ಗಂಟೆಯ ವರೆಗೆ ಸ್ಥಳೀಯ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ಇರುತ್ತದೆ. ಮಧ್ಯಾಹ್ನ 1 ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ, ಅಪರಾಹ್ನ 3ರಿಂದ 4 ರವರೆಗೆ ಕದ್ರಿ ನೃತ್ಯ ವಿದ್ಯಾಲಯ ಚಾರಿಟೇಬಲ್ ಟ್ರಸ್ಟ್ ವಿದ್ಯಾರ್ಥಿಗಳಿಂದ 'ನೃತ್ಯ ನಮನ', 4ರಿಂದ 5ರ ವರೆಗೆ ಗಾನ ನೃತ್ಯ ಅಕಾಡೆಮಿಯ ವಿದುಷಿ ಬಿಂದಿಯಾ ಜಿ ಬಂಗೇರ ಮತ್ತು ಬಳಗದಿಂದ ' ನೃತ್ಯ ಸಂಗಮ' ಕಾರ್ಯಕ್ರಮ ಆಯೋಜಿಸಲಾಗಿದೆ.
ಸಂಜೆ 5ರಿಂದ ಧಾರ್ಮಿಕ ಸಭೆ ಮತ್ತು ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆ ನಡೆಯಲಿದೆ. ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರಿಂದ ಆಶೀರ್ವಚನ ನೆರವೇರಲಿದೆ. ಭಾರತೀಯ ಮನೋವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷರಾದ ಡಾ. ಕಿರಣ್ ಕುಮಾರ್ ಪಿ.ಕೆ ಅಧ್ಯಕ್ಷತೆ ವಹಿಸಲಿದ್ದಾರೆ.
ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿ, ಮಂಗಳೂರು ಉತ್ತರ ಶಾಸಕ ಡಾ. ವೈ ಭರತ್ ಶೆಟ್ಟಿ, ಮುಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್, ಎಂ.ಎಂ ಕನ್‌ಸ್ಟ್ರಕ್ಷನ್ಸ್,ನ ಮಹಾಬಲ ಕೊಟ್ಟಾರಿ ಆಪಲ್ ಪ್ಲೈನ ಅನಿಲ್ ಬೋಂದೇಲ್ ಮುಂತಾದವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ರಾತ್ರಿ 7:30ಕ್ಕೆ ಮೂಡಗಣಪತಿ ಸೇವೆ ಮತ್ತು ಮಹಾಪೂಜೆ, 9:30ಕ್ಕೆ 'ತುಳುನಾಡ ಸಂಸ್ಕೃತಿ' ಪ್ರಯೋಗ, ನೆರವೇರಲಿದೆ.
ಸೆ.1ರಂದು ಬೆಳಗ್ಗೆ 9:30ರಿಂದ ಶ್ರೀ ಲಕ್ಷ್ಮೀಗಣಪತಿ ಮಹಾಯಾಗ ನಡೆಯಲಿದೆ. ಬಳಿಕ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ 1 ಗಂಟೆಗೆ ಮಹಾಪೂಜೆ, ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ, 3 ಗಂಟೆಯಿಂದ ನರ್ತನ ಗಣಪತಿ ನೃತ್ಯ ಮಾಲಿಕಾ, ಸಂಜೆ 4ರಿಂದ ಭರತ ನಾಟ್ಯ ಮಂಜರಿ ನೆರವೇರಲಿದೆ.
ಸಂಜೆ 5 ಗಂಟೆಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ. ಡಿ ವೀರೇಂದ್ರ ಹೆಗ್ಗಡೆ ಅವರಿಂದ ಆಶೀರ್ವಚನ, ಲಯನ್ ಸಂಜೀವ ಶೆಟ್ಟಿ ಅವರ ಸಭಾಧ್ಯಕ್ಷತೆಯಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಸಂಸದ ನಳಿನ್ ಕುಮಾರ್ ಕಟೀಲು, ಸಚಿವರಾದ ಸುನಿಲ್ ಕುಮಾರ್, ಶಾಸಕರಾದ ಡಿ. ವೇದವ್ಯಾಸ ಕಾಮತ್, ವಿಧಾಣ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಮತ್ತು ಡಾ.ಮಂಜುನಾಥ್ ಭಂಡಾರಿ, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಮುಂತಾದವರು ಭಾಗವಹಿಸಲಿದ್ದಾರೆ.
ಸಂಜೆ 5ರಿಂದ ಧಾರ್ಮಿಕ ಸಭೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಆಶೀರ್ವಚನ ನೀಡಲಿದ್ದು, ಲಯನ್ ಸಂಜೀತ್ ಶೆಟ್ಟಿ ಪಿಎಂಜೆಎಫ್ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಂಸದ ನಳಿನ್ ಕುಮಾರ್ ಕಟೀಲ್, ಸಚಿವ ವಿ. ಸುನಿಲ್ ಕುಮಾರ್, ಶಾಸಕ ಡಿ. ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಮಂಜುನಾಥ ಭಂಡಾರಿ, ಕರ್ಣಾಟಕ ಬ್ಯಾಂಕಿನ ಅಧಿಕಾರಿ ಗೋಕುಲ್‌ದಾಸ್ ಪೈ, ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ರಾಜೇಂದ್ರ ಕುಮಾರ್, ಮಾಜಿ ಸಚಿವ ಕೃಷ್ಣ ಪಾಲೆಮಾರ್, ರೆಡ್‌ಕ್ರಾಸ್ ದ.ಕ ಅಧ್ಯಕ್ಷ ಸಿ.ಎ ಶಾಂತಾರಾಮ ಶೆಟ್ಟಿ, ಉದ್ಯಮಿಗಳಾದ ಅಜಿತ್ ಕುಮಾರ್ ಕೆ.ಪಿ, ಜಿತೇಂದ್ರ ಎಸ್, ಕೊಟ್ಟಾರಿ, ಮನೋಜ್ ಸರಿಪಳ್ಳ, ನಂದಗೋಕುಲ ಶೆಣೈ, ಕದ್ರಿ ಕ್ಷೇತ್ರದ ಮೊಕ್ತೇಸರರಾದ ಎಚ್.ಕೆ ಪುರುಷೋತ್ತಮ, ಧಾರ್ಮಿಕ ಪರಿಷತ್ ನಿಕಟಪೂರ್ವ ಸದಸ್ಯ ಪದ್ಮನಾಭ ಕೋಟ್ಯಾನ್ ಭಾಗವಹಿಸಲಿದ್ದಾರೆ.
ರಾತ್ರಿ 7ರಿಂದ ಅಷ್ಟಾವಧಾನ ಸೇವೆ ಮತ್ತು ಮಹಾ ರಂಗಪೂಜೆ ನಡೆಯಲಿದೆ. ಈ ಸಂದರ್ಭದಲ್ಲಿ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದ ತಂತ್ರಿಗಳಾದ ವೇ| ವಿದ್ವಾನ್ ಕೃಷ್ಣರಾಜ ತಂತ್ರಿ ಅವರ ದಿವ್ಯ ಉಪಸ್ಥಿತಿ ಇರಲಿದೆ.
ರಾತ್ರಿ 8 ಗಂಟೆಗೆ ಮಹಾಪೂಜೆ ಮತ್ತು ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ 9:30ರಿಂದ ಸಾಲಿಗ್ರಾಮ ಶ್ರೀ ಗುರುಪ್ರಸಾದಿತ ಯಕ್ಷಗಾನ ಮಂಡಳಿ ಅವರಿಂದ 'ಚಂದ್ರಮುಖಿ- ಸೂರ್ಯಸಖಿ' ಯಕ್ಷಗಾನ ಪ್ರದರ್ಶನವಿದೆ.
ಸೆ.2ರಂದು ಬೆಳಗ್ಗೆ ಪ್ರಾತಃಕಾಲ ಪೂಜೆ, ಶ್ರೀ ವಿದ್ಯಾ ಗಣಪತಿ ಯಾಗ, ಬಳಿಕ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಪೂರ್ಣಾಹುತಿ, ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಲಿದೆ.
ಮಧ್ಯಾಹ್ನ 1.30ರಿಂದ ಕದ್ರಿ ನವನೀತ ಶೆಟ್ಟಿ ವಿರಚಿತ ಶ್ರೀ ದೇವಿ ಮಾರಿಯಮ್ಮ- ತುಳು ನಾಟಕ ಪ್ರದರ್ಶನವಿದೆ. ಸಂಜೆ 4:30ಕ್ಕೆ ವಿಸರ್ಜನಾ ಪೂಜೆ ಬಳಿಕ 5:30ರಿಂದ ಶ್ರೀ ಮಹಾಗಣಪತಿ ದೇವರ ಶೋಭಾಯಾತ್ರೆ ನಡೆಯಲಿದೆ.
ಶೋಭಾಯಾತ್ರೆಯು ಗಣೇಶ ಮಂಟಪದಿಂದ ಹೊರಟು ಶ್ರೀ ದುರ್ಗಾ ಕಟ್ಟೆಯ ಎದುರಿನಿಂದ ಹಾದು ಮೇರಿಹಿಲ್ ತನಕ ಸಾಗಿ ಅಲ್ಲಿಂದ ಹಿಂತಿರುಗಿ ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನದ ಮುಂಭಾಗದ ಮಾರ್ಗವಾಗಿ ಪದವಿನಂಗಡಿ, ಬೊಂದೇಲ್, ಕಾವೂರು ಮಾರ್ಗದಿಂದ ಸಾಗಿ ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕೆರೆಯಲ್ಲಿ ಗಣೇಶ ಮೂರ್ತಿಯ ವಿಸರ್ಜನೆ ನಡೆಯಲಿದೆ.
ಶೋಭಾಯಾತ್ರೆಯಲ್ಲಿ ವಿಶೇಷ ದೃಶ್ಯರೂಪಕ, ಸುಪ್ರಸಿದ್ಧ ಚೆಂಡೆ ವಾದನ, ಸ್ಯಾಕ್ಸೋಫೋನ್, ಭಜನೆ, ಹುಲಿವೇಷ, ಆಕರ್ಷಕ ಸ್ತಬ್ಧ ಚಿತ್ರಗಳು ವಿಶೇಷ ಆಕರ್ಷಣೆಯಾಗಿರುತ್ತವೆ.
ಸಾರ್ವಜನಿಕ ಗಣೇಶೋತ್ಸವದ ಪ್ರಯುಕ್ತ ನಡೆಯುವ ಸ್ಪರ್ಧೆಗಳ ವಿವರ:
ಆ.28ರಂದು ಪದವಿನಂಗಡಿಯ ಗಣೇಶ ಮಂಟಪದಲ್ಲಿ ಕ್ರೀಡಾ ಸ್ಪರ್ಧೆಗಳು ನಡೆಯಲಿದ್ದು, ಪುರುಷರು, ಮಹಿಳೆಯರು, ಮಕ್ಕಳಿಗಾಗಿ ಪ್ರತ್ಯೇಕ ವಿಭಾಗಗಳಲ್ಲಿ ಹಗ್ಗ ಜಗ್ಗಾಟ ಮತ್ತು ಇತರ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಆ.31ರಂದು ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆ ಮತ್ತು ರಂಗೋಲಿ ಸ್ಪರ್ಧೆಗಳು ನಡೆಯಲಿವೆ.
ಕರಾಟೆ ಸ್ಪರ್ಧೆ, ಆಟಿಡೊಂಜಿ ದಿನ, ವಾಲಿಬಾಲ್ ಪಂದ್ಯಾಟ, ಕೆರಂ ಸ್ಪರ್ಧೆ, ಸಾಂಸ್ಕೃತಿಕ ಸ್ಪರ್ಧೆಗಳು (ಭಕ್ತಿಗೀತೆ, ಛದ್ಮವೇಷ, ಭರತ ನಾಟ್ಯ, ಜಾನಪದ ನೃತ್ಯ, ಮೆಹಂದಿ ಹಾಕುವ ಸ್ಪರ್ಧೆ) ಈಗಾಗಲೇ ಆ.7ರಿಂದ 21ರ ವರೆಗೆ ಬೇರೆ ಬೇರೆ ದಿನಗಳಲ್ಲಿ ನಡೆದಿವೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
Post a Comment