ನೆಲಮಂಗಲ: ರಸ್ತೆಯಲ್ಲಿ ಕೆಟ್ಟುನಿಂತ ಕ್ಯಾಂಟರ್ ವಾಹನಕ್ಕೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ವೀವರ್ಸ್ ಕಾಲೋನಿಯ ಗೋಪಿ ವೆಂಕಟೇಶ್ವರ ರಸ್ತೆಯಲ್ಲಿ ನಡೆದಿದೆ.
ತಡರಾತ್ರಿ ಪತಿ ಪತ್ನಿ ಜಗಳ ನಡುವೆ ಪತಿಯ ಸಾವಿನಲ್ಲಿ ಅಂತ್ಯಗೊಂಡಿದೆ.
ರಾಯಚೂರು ಮೂಲದ 42 ವರ್ಷ ಸಿದ್ಧಯ್ಯ ಮೃತ ದುರ್ದೈವಿ. ಈತ ನೆಲಮಂಗಲದ ಕುವೆಂಪು ನಗರದಲ್ಲಿ ವಾಸ, ಚಾಲಕನಾಗಿ ಕೆಲಸ ನಿರ್ವಹಣೆ ಮಾಡಿಕೊಂಡಿದ್ದನು.
ತಡರಾತ್ರಿ ಮದ್ಯಸೇವಿಸಿ ಪತ್ನಿಯೊಂದಿಗೆ ಜಗಳ ಮಾಡಿಕೊಂಡಿದ್ದ ಎಂದು ಹೇಳಲಾಗಿದೆ. ಇದರಿಂದ ಬೆಳಗಿನ ಜಾವ 4 ಗಂಟೆಗೆ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ.
ಸ್ಥಳಕ್ಕೆ ನೆಲಮಂಗಲ ಟೌನ್ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
Post a Comment