ಹೊಸನಗರ: ಕಲಾದರ್ಶನ ಮಾಸಪತ್ರಿಕೆ ವತಿಯಿಂದ ಕಲಾದರ್ಶನ ಪುನರ್ನವ-8- ವಾರ್ಷಿಕ ಸ್ನೇಹ ಮಿಲನ ಆಯೋಜಿಸಲಾಗಿದ್ದು, ಇದರ ಪ್ರಯುಕ್ತ ಜುಲೈ 23ರಂದು ಕಾರಣಗಿರಿಯ ಶ್ರೀ ಸಿದ್ಧಿವಿನಾಯಕ ಸಭಾಭವನದಲ್ಲಿ ನಾರದ ಪುರಸ್ಕಾರ ಮತ್ತು ಸ್ವಾತಂತ್ರ್ಯ ಅಮೃತ ಮಹೋತ್ಸವ- ವಿಶೇಷ ಸಂಚಿಕೆ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲಾದರ್ಶನದ ಪ್ರಧಾನ ಸಂಪಾದಕರಾದ ಹಾದಿಗಲ್ಲು ಲಕ್ಷ್ಮೀನಾರಾಯಣ ವಹಿಸಲಿದ್ದಾರೆ. ಹಿರಿಯ ಪತ್ರಕರ್ತ ದು.ಗು. ಲಕ್ಷ್ಮಣ, ಪತ್ರಕರ್ತೆ ಶ್ರೀ ಲಕ್ಷ್ಮೀ ರಾಜಕುಮಾರ್, ಸಾಹಿತಿ ಟಿ.ಎಲ್ ಸುಬ್ರಹ್ಮಣ್ಯ ಅಡಿಗ ಭಾಗವಹಿಸಲಿದ್ದಾರೆ.
ಈ ಬಾರಿಯ ನಾರದ ಪ್ರಶಸ್ತಿಯನ್ನು ತೀರ್ಥಹಳ್ಳಿಯ ಗ್ರಾಮಭಾರತಿಯ ದಿ. ಟಿ. ರಘುವೀರ್ (ಮರಣೋತ್ತರ), ಕೊಡಚಾದ್ರಿಯ ಕೆ. ನಿತ್ಯಾನಂದ ಪೈ, ಮೂಡುಬಿದಿರೆಯ ಶಿಕಾರಿಪುರ ಈಶ್ವರ ಭಟ್, ಎಚ್.ಎಂ ದತ್ತಾತ್ರೇಯ ಅಡಿಗ, ಮಹೇಶ್ ಮತ್ತು ವಿಜೇಂದ್ರ ಪ್ರಭು ಅವರಿಗೆ ಪ್ರದಾನ ಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
إرسال تعليق