ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಲೆಮಾರಿಗಳಂತೆ ನಟಿಸಿ ಬೆಂಗಳೂರಿನಲ್ಲಿ ಹ್ಯಾಶಿಶ್ ಆಯಿಲ್ ಮಾರಾಟ, ನಾಲ್ವರು ಬಂಧನ

ಅಲೆಮಾರಿಗಳಂತೆ ನಟಿಸಿ ಬೆಂಗಳೂರಿನಲ್ಲಿ ಹ್ಯಾಶಿಶ್ ಆಯಿಲ್ ಮಾರಾಟ, ನಾಲ್ವರು ಬಂಧನ

 


ಬೆಂಗಳೂರು: ಅಲೆಮಾರಿಗಳ ಸೋಗಿನಲ್ಲಿ ಬೆಂಗಳೂರಿಗೆ ಹ್ಯಾಶಿಶ್ ಆಯಿಲ್ ತಂದು ಮಾರಾಟ ಮಾಡುತ್ತಿದ್ದ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ಪ್ರತಿಷ್ಠಿತ ಪಬ್, ಬಾರ್ ಆ್ಯಂಡ್ ರೆಸ್ಟೋರೆಂಟ್​ಗಳಲ್ಲಿ ಗಿರಾಗಿಗಳಿಗೆ ಹ್ಯಾಶ್ ಆಯಿಲ್ ಮಾರಾಟ ಮಾಡುತ್ತಿದ್ದರು.

ಡಿಜೆ ಜೂಡ್ ಹ್ಯಾರೀಸ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಅಂತರರಾಜ್ಯ ಪೆಡ್ಲರ್ಸ್ ಮಾಹಿತಿ ಹೊರಬಂದಿದೆ.

ಆರೋಪಿಗಳು ಸೆಂಥಿಪಲ್ಲಿ ಅರಣ್ಯ ಪ್ರದೇಶದಲ್ಲಿ ಗಾಂಜಾ ಬೆಳೆದು ಹ್ಯಾಶಿಶ್ ಆಯಿಲ್ ತಯಾರಿಕೆ ಮಾಡಿ, ಮಾರಾಟ ಮಾಡ್ತಿದ್ದರು.

ಕೊಚ್ಚಿನ್, ಚೆನೈ, ಹೈದ್ರಾಬಾದ್, ಮುಂಬೈ ಹಾಗೂ ಮೇಟ್ರೋಪಾಲಿಟನ್ ನಗರಗಳ ಡ್ರಗ್​ಗಳನ್ನು ಸಂಪರ್ಕಿಸಿ, ಪ್ರಮುಖ ಸಿಟಿಗಳ ರೈಲ್ವೆ ನಿಲ್ದಾಣಗಳ ಬಳಿ ಕರೆಸಿಕೊಂಡು ಮಾರಾಟ ಮಾಡುತ್ತಿದ್ದರು.


ಅರಣ್ಯಾಧಿಕಾರಿಗಳ ಕಣ್ತಪ್ಪಿಸಿ ಕಳ್ಳದಾರಿಯಲ್ಲಿ ಮೂವತ್ತು ಕಿ.ಮೀ ಕಾಡಲ್ಲಿ ಕಾಲ್ನಡಿಗೆ ಮೂಲಕ ತೆರಳಿ ಹ್ಯಾಶಿಶ್ ಆಯಿಲ್ ತಯಾರಿಕೆ ಮಾಡುತ್ತಿದ್ದರು.

ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರನ್ನು ಬಂಧಿಸಿರುವ ಪೊಲೀಸರು, ನಾಲ್ಕು ಕೋಟಿ ಬೆಲೆಬಾಳುವ 5 ಕೆಜಿ ಹ್ಯಾಶಿಶ್ ಆಯಿಲ್ ಮತ್ತು ಗಾಂಜಾ ಜಪ್ತಿ ಮಾಡಿದ್ದಾರೆ.

ಇವರು ಕೇರಳ, ತಮಿಳುನಾಡು, ಆಂಧ್ರಪ್ರದೇಶದಿಂದ ಬಂದು ಡ್ರಗ್ಸ್​ ಪೆಡ್ಲಿಂಗ್​ ಮಾಡುತ್ತಿದ್ದರು. ಯಾವುದೇ ಮೊಬೈಲ್ ಮತ್ತು ದಾಖಲೆಗಳನ್ನ ಪಡೆಯದೆ ಸಪ್ಲೈ ಮಾಡ್ತಿದ್ದರು ಎಂದು ತಿಳಿದು ಬಂದಿದೆ.


0 تعليقات

إرسال تعليق

Post a Comment (0)

أحدث أقدم