ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಚ್ಚು-ಮೆಚ್ಚಿನ ವಾರ್ಡನ್

ಅಚ್ಚು-ಮೆಚ್ಚಿನ ವಾರ್ಡನ್


ಎಲೆ ಮರೆಯ ಕಾಯಿಯಂತೆ ಬೆಳೆದ ವ್ಯಕ್ತಿ, ತಮ್ಮ ಸಂಪೂರ್ಣ ಸಮಯವನ್ನು ಮಕ್ಕಳ ಜೊತೆ ಕಳೆಯುತ್ತಿದ್ದ ಇವರು ಎಲ್ಲ ಮಕ್ಕಳ ಮನದಲ್ಲಿ ಪ್ರೀತಿಯ ಗೋಪುರವನ್ನು ಇರಿಸಿಕೊಂಡಿದ್ದಾರೆ ಇವರೇ ಭವಾನಿ.ಪಿ. ಉಮೇಶ್


ಇವರ ಬಗ್ಗೆ ಬರೆಯಲು ಪದಗಳೆ ಸಿಗದು ಬರೆಯಲು ಕುಳಿತರೆ ದಿನಗಳೇ ಸಾಲದು. ತನ್ನ ಎಳೆಯ ವಯಸ್ಸಿನಲ್ಲಿ  ಹಾಸ್ಟೇಲ್ ಜೀವನವನ್ನು ಅನುಭವಿಸಿ ಸವಿ ಸವಿ ನೆನಪುಗಳನ್ನು ಹೊರ ಹಾಕಿದಂತಹ ವ್ಯಕ್ತಿ. ಪ್ರತಿಯೊಂದು ಮಗುವನ್ನು ಸದಾ ಅವರ ಮಕ್ಕಳಂತೆಯೇ ಕಾಣುತ್ತಿದ್ದರು. ಜೀವನ ಅಂದರೆ ಏನು? ತಂದೆ-ತಾಯಿ ನಮಗೆಲ್ಲರಿಗೂ ಎಷ್ಟು ಮುಖ್ಯ? ಮಕ್ಕಳಾದ ನಮ್ಮಲ್ಲಿ ಎಂತಹ ಗುಣ ನಾವೂ ಹೊಂದಿರಬೇಕು? ಇದೆಲ್ಲವನ್ನು ಮಕ್ಕಳ ಮನದಲ್ಲಿ ಮೂಡಿಸಿ ಎಲ್ಲ ಮಕ್ಕಳ ಬದುಕಿಗೆ ಸ್ಪೂರ್ತಿಯಾದಂತವರು. ಇವರ ಈ ಸೇವೆಯಲ್ಲಿ ಸಾವಿರಕ್ಕೂ ಹೆಚ್ಚು ಮಕ್ಕಳು ಇವರ ಕೆಳಗೆ ಕಲಿತು ಒಳ್ಳೆಯ ಸ್ಥಾನದಲ್ಲಿ ತಮ್ಮನ್ನು ತಾವೂ ಗುರುತಿಸಿಕೊಂಡಿದ್ದಾರೆ.


ಇವರು ತೋರುವ ಮುಗುಳುನಗೆ ಎಲ್ಲರನ್ನೂ ಆಕರ್ಷಿಸುವಂತಹ ಶಕ್ತಿಯನ್ನು ಹೊಂದಿದೆ. ಅವರಾಡುವ ಮಾತುಗಳು ವಸತಿ ಮಕ್ಕಳೆಲ್ಲರ ಮನದಲ್ಲಿ ಎಂದೆಂದಿಗೂ ಶಾಶ್ವತವಾಗಿ ಅಡಕವಾಗಿರುವಂತದ್ದು.


ಮಾತೃದೇವೋಭವ, ಪಿತೃದೇವೋಭವ, ಆಚಾರ್ಯ ದೇವೋಭವ ಹಾಗೇ ಅತಿಥಿ ದೇವೋಭವ ಎಂಬ ಭಾವನೆ ನಮ್ಮೆಲ್ಲರಲ್ಲಿ ಇದ್ದರೆ ಅದು ನಮಗೆ ಮುಂದೊಂದು ದಿನ ನಮ್ಮನ್ನು ಒಳ್ಳೆಯತನದಲ್ಲಿ ಗುರುತಿಸುವಂತೆ ಮಾಡುತ್ತದೆ. 

 -ಭವಾನಿ ಪಿ. ಉಮೇಶ್ 


ನಾವೂ ಅಂದುಕೊಂಡ ಕನಸು ನನಸಾಗಬೇಕಾದರೆ ಕಠಿಣ ಪರಿಶ್ರಮ ಅವಶ್ಯಕ, ನಾವು ಎಳೆಯ ವಯಸ್ಸಿನಿಂದಲೂ ನಮಗೊಂದು ಆಸೆ ಮಾಡಿರುತ್ತದೆ ನಾವು ಮುಂದೇನಾಗಬೇಕೆಂದು ಕನಸು ನನಸಾಗುವಲ್ಲಿಯವರೆಗೂ ಹಠ, ತಾಳ್ಮೆ, ಛಲ ಇದೆಲ್ಲವೂ ನಮ್ಮೊಳಗೆ ಮೈಗೂಡಿರಬೇಕು ಎಂದು ಹೇಳುವ ಇವರ ಶುಭ ನುಡಿಗಳು ಮಕ್ಕಳನ್ನು ಸದೃಡ ಪ್ರಬಲರನ್ನಾಗಿ ಮಾಡುವ ಶಕ್ತಿಯನ್ನು ಹೊಂದಿತ್ತು.


-ದೀಕ್ಷಿತ ಗಿರೀಶ್

 ಪತ್ರಿಕೋದ್ಯಮ ವಿದ್ಯಾರ್ಥಿನಿ

0 تعليقات

إرسال تعليق

Post a Comment (0)

أحدث أقدم