ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಗೂಡ್ಸ್ ವಾಹನಕ್ಕೆ ಎಕ್ಸ್‌ಪ್ರೆಸ್ ರೈಲು ಡಿಕ್ಕಿ

ಗೂಡ್ಸ್ ವಾಹನಕ್ಕೆ ಎಕ್ಸ್‌ಪ್ರೆಸ್ ರೈಲು ಡಿಕ್ಕಿ

 


ಬೀದರ್: ಗೂಡ್ಸ್ ವಾಹನಕ್ಕೆ ಎಕ್ಸ್ ಪ್ರೆಸ್ ರೈಲು ಢಿಕ್ಕಿ ಹೊಡೆದ ಘಟನೆಯೊಂದು ಮಂಗಳವಾರ ಸಾಯಂಕಾಲ ತಾಲೂಕಿನ ಸಿದ್ದೇಶ್ವರ ಕ್ರಾಸ್ ಹತ್ತಿರ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.

ಬೀದರ್ ಕಡೆಯಿಂದ ಭಾಲ್ಕಿಗೆ ಪ್ರಯಾಣಿಕರ ರೈಲು ಆಗಮನದ ಸಮಯದಲ್ಲಿ ರೈಲ್ವೆ ಸಿಬ್ಬಂದಿ ಗೇಟ್ ಹಾಕಿದ್ದು, ಅಷ್ಟರಲ್ಲಿ ವೇಗವಾಗಿ ಬಂದ ಗೂಡ್ಸ್ ಟ್ರಕ್ ಗೇಟ್ ಮುರಿದು ಒಳಗೆ ನುಗ್ಗಿದೆ.

ಎರಡನೇ ಗೇಟ್ ಹತ್ತಿರ ಗೂಡ್ಸ್ ವಾಹನ ನಿಂತಿದೆ. ಅಷ್ಟರಲ್ಲಿ ಎಕ್ಸಪ್ರೆಸ್ ರೈಲು ಬರುತಿತ್ತು. ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತನಾಗಿ ಕೆಂಪು ನಿಶಾನೆ ತೋರಿಸಿದ ಇದನ್ನು ಗಮನಿಸಿದ ರೈಲ್ವೆ ಚಾಲಕ ರೈಲಿನ ವೇಗ ತಗ್ಗಿಸುತ್ತಾ ಬಂದಿದ್ದು, ಗೇಟ್ ಸಮೀಪ ಬಂದು ವಾಹನಕ್ಕೆ ಡಿಕ್ಕಿ ಹೊಡೆದಿದೆ.

ಅಷ್ಟು ಹೊತ್ತಿಗೆ ಟ್ರಕ್ ಚಾಲಕ ಹೊರಗೆ ಓಡಿ ಹೋಗಿದ್ದು, ಜೀವಹಾನಿ ತಪ್ಪಿದೆ. ಚಾಲಕನನ್ನು ವಶಕ್ಕೆ ಪಡೆದ ರೈಲ್ವೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


0 تعليقات

إرسال تعليق

Post a Comment (0)

أحدث أقدم