ಬೆಂಗಳೂರು: ಕ್ರೆಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದು, ಅವರ ಮದುವೆಯ ಆಮಂತ್ರಣ ಪತ್ರಿಕೆ ಹೊರಬಂದಿದೆ.
ಮನೋರಂಜನ್ ಆಗಸ್ಟ್ 20 ಮತ್ತು 21 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಸಂಗೀತಾ ದೀಪಕ್ ಎಂಬವರ ಜೊತೆ ಮದುವೆಯಾಗಲಿದ್ದಾರೆ. ಈ ಕಾರ್ಯಕ್ರಮಕ್ಕೆ ರವಿಚಂದ್ರನ್ ಕುಟುಂಬ ವಿಶಿಷ್ಟವಾಗಿ ವೆಡ್ಡಿಂಗ್ ಕಾರ್ಡ್ ತಯಾರಿಸಿದೆ.
ಆಮಂತ್ರಣ ಪತ್ರಿಕೆಯಲ್ಲಿ ರವಿಮಾಮನ ವಿಶಿಷ್ಟ ಪೋಟೋವಿದ್ದು ಜೊತೆಗೆ ಹೃದಯದ ವಿನ್ಯಾಸವಿದೆ.
ತಮ್ಮ ಸಿನಿಮಾಗಳನ್ನು ಕ್ರಿಯೇಟಿವ್ ಆಗಿ ಮಾಡುವ ರವಿಚಂದ್ರನ್ ತಮ್ಮ ಮಗನ ಮದುವೆ ಆಮಂತ್ರಣ ಪತ್ರಿಕೆ ಬಗ್ಗೆಯೂ ವಿಶೇಷವಾಗಿ ಗಮನಕೊಟ್ಟಿದ್ದಾರೆ.
إرسال تعليق