ಬೆಂಗಳೂರು : ತಮ್ಮ ವಿಭಿನ್ನ ಕಾಮಿಡಿ ಮೂಲಕ ಜನರ ಮನ ಗೆದ್ದ ನಟ ಕೋಮಲ್ ಅವರು ಇಂದು ತಮ್ಮ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.
ಮೊದ ಮೊದಲು ಸಿನಿಮಾಗಳಲ್ಲಿ ಕಾಮಿಡಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಕೋಮಲ್, ನಂತರ ಹೀರೋ ಆಗಿ ಮಿಂಚಿದವರು.
ಅವರ ಗೋವಿಂದಾಯ ನಮಃ ಸಿನಿಮಾ ಇಂದಿಗೂ ಸೂಪರ್. ಜುಲೈ 04, 1973 ತುಮಕೂರು ಜಿಲ್ಲೆಯ ಮಾಯಾಸಂದ್ರದಲ್ಲಿ ಜನಿಸಿದ ಇವರು ಸ್ಯಾಂಡಲ್ವುಡ್ನ ನವರಸ್ ನಾಯಕ ಜಗ್ಗೇಶ್ ಅವರ ಸಹೋದರ.
ಕಾಮಿಡಿ ಪಾತ್ರ ಮಾಡುವ ಮೊದಲು ಕೋಮಲ್ ಖಳ ನಟನಾಗಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟವರು.
Post a Comment