ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಜೀಪಪಡು; ಈಜಲು ಹೋಗಿದ್ದ ಯುವಕರ ತಂಡದಲ್ಲಿ; ಇಬ್ಬರು ನೀರು ಪಾಲಾಗಿದ್ದು, ಓರ್ವನ ರಕ್ಷಣೆ

ಸಜೀಪಪಡು; ಈಜಲು ಹೋಗಿದ್ದ ಯುವಕರ ತಂಡದಲ್ಲಿ; ಇಬ್ಬರು ನೀರು ಪಾಲಾಗಿದ್ದು, ಓರ್ವನ ರಕ್ಷಣೆ

 


ಬಂಟ್ವಾಳ : ನದಿಯಲ್ಲಿ ಈಜಲು ಹೋಗಿದ್ದ ಐವರು ಬಾಲಕರಲ್ಲಿ ಇಬ್ಬರು ನೀರು ಪಾಲಾಗಿದ್ದು, ಓರ್ವನನ್ನು ಸ್ಥಳೀಯರು ರಕ್ಷಣೆ ಮಾಡಿದರೆ, ಮತ್ತೋರ್ವ ಬಾಲಕ ನಾಪತ್ತೆಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಉಳ್ಳಾಲ ತಾಲೂಕಿನ ಸಜಿಪಪಡು ಗ್ರಾಮದ ನೇತ್ರಾವತಿ ನದಿ ಸಮೀಪದ ತಲೆಮೊಗರು ಎಂಬಲ್ಲಿ‌ ನಡೆದಿದೆ.

ರುಕ್ಮಯ ಸಪಲ್ಯ ಎಂಬವರ ಪುತ್ರ ಅಶ್ವಿತ್ (19) ಎಂಬಾತ ನೀರು ಪಾಲಾಗಿ ನಾಪತ್ತೆಯಾದ ಬಾಲಕನಾಗಿದ್ದಾನೆ. ಸಜೀಪಪಡು ಪೆರ್ವ ನಿವಾಸಿ ಹರ್ಷಿತ್ ಎಂಬ ಬಾಲಕನನ್ನು ಸ್ಥಳೀಯರು ರಕ್ಷಿಸಿದ್ದು ಅಸ್ವಸ್ಥಗೊಂಡಿದ್ದ ಆತನನ್ನು ದೇರಳಕಟ್ಟೆ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.


ವಿಶಾಲ್, ವಿಕೇಶ್, ಲಿಖಿತ್ ಎಂಬವರು ಸುರಕ್ಷಿತವಾಗಿ ದಡ ಸೇರಿದ್ದಾರೆ.

ತಲೆಮೊಗರು ನಿವಾಸಿ ನಾಗೇಶ್ ಸಪಲ್ಯ ಎಂಬವರ ಮನೆಯಲ್ಲಿ ಮಗುವಿನ ನಾಮಕರಣ ಕಾರ್ಯಕ್ರಮ ನಡೆದಿದ್ದು ಕಾರ್ಯಕ್ರಮ ಮುಗಿದ ಬಳಿಕ ನಾಗೇಶ್ ಅವರ ಅಣ್ಣ ರುಕ್ಮಯ ಸಪಲ್ಯ ಅವರ ಪುತ್ರ ಅಶ್ವಿತ್ ಮತ್ತು ಸಂಬಂಧಿಗಳ ಮಕ್ಕಳಾದ ಹರ್ಷಿತ್, ಲಿಖಿತ್, ವಿಕೇಶ್ ಮತ್ತು ವಿಶಾಲ್ ಒಟ್ಟು ಐವರು ಜೊತೆಯಾಗಿ ನೇತ್ರಾವತಿ ನದಿಗೆ ತೆರಳಲಿ ಈಜಾಡುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.


0 Comments

Post a Comment

Post a Comment (0)

Previous Post Next Post