ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಜೀಪು ಡಿವೈಡರ್ ಗೆ ಡಿಕ್ಕಿ ಹೊಡೆದು ಚರಂಡಿಗೆ ಪಲ್ಟಿ ; ಯುವಕ ಸಾವು, ಮೂವರು ಗಂಭೀರ

ಜೀಪು ಡಿವೈಡರ್ ಗೆ ಡಿಕ್ಕಿ ಹೊಡೆದು ಚರಂಡಿಗೆ ಪಲ್ಟಿ ; ಯುವಕ ಸಾವು, ಮೂವರು ಗಂಭೀರ

 


ಕುಷ್ಟಗಿ : ಇಲಕಲ್ ಪಟ್ಟಣದ ಹೊರವಲಯದಲ್ಲಿ ಜೀಪ್ ಪಲ್ಟಿಯಾಗಿ ಓರ್ವ ಯುವಕ ದಾರುಣ ಸಾವೀಗೀಡಾಗಿದ್ದು, ಮೂವರಿಗೆ ಗಂಭೀರವಾಗಿ ಗಾಯಗೊಂಡ ಘಟನೆಯೊಂದು ಇಲಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


ಮೃತ ಯುವಕ ಹೇರೂರು ಗ್ರಾಮದ ಶಿವು ಅಳವಂಡಿ ಎಂದು ಗುರುತಿಸಲಾಗಿದೆ.

ಉಳಿದ ಗಾಯಾಳುಗಳನ್ನು ಇಲಕಲ್, ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.


ತೆರೆದ ಜೀಪ್ ಇದಾಗಿದ್ದು, ಇಲಕಲ್ ಪಟ್ಟಣದ ಅಶೋಕ ಚಲವಾದಿ ಅವರ ಹುಟ್ಟು ಹಬ್ಬಕ್ಕಾಗಿ ಮಹಾಂತೇಶ ಚಲವಾದಿ ಎಂಬುವರು ಜೀಪ್ ಕೊಂಡೊಯ್ದಿದ್ದರು.


ಮಂಗಳವಾರ ಮಧ್ಯಾಹ್ನ ಎನ್ ಎಚ್ ನಲ್ಲಿ ಅತಿವೇಗ ಹಾಗೂ ನಿರ್ಲಕ್ಷದ ಚಾಲನೆಯಿಂದ ಚಾಲಕನ ನಿಯಂತ್ರಣ ಕಳೆದುಕೊಂಡ ಜೀಪು ಡಿವೈಡರ್ ಡಿಕ್ಕಿ ಹೊಡೆದು ಚರಂಡಿ ಮೇಲೆ ಪಲ್ಟಿಯಾಗಿ ಬಿದ್ದಿದೆ.

0 تعليقات

إرسال تعليق

Post a Comment (0)

أحدث أقدم