ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವೇಗವಾಗಿ ಬಂದ ಕಾರು ಕಾಂಪೌಂಡ್ ಗೆ ಡಿಕ್ಕಿ; ಸಣ್ಣ ಪುಟ್ಟ ಗಾಯ

ವೇಗವಾಗಿ ಬಂದ ಕಾರು ಕಾಂಪೌಂಡ್ ಗೆ ಡಿಕ್ಕಿ; ಸಣ್ಣ ಪುಟ್ಟ ಗಾಯ

 


ಬೆಂಗಳೂರು:  ಕಾರು ಅತಿ ವೇಗದಿಂದ ಕಾಂಪೌಂಡ್ ಗೆ ಡಿಕ್ಕಿ ಹೊಡೆದ ಘಟನೆಯೊಂದು ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. 


ನಗರದ ರಾಜ್‌ಭವನ ರಸ್ತೆಯಲ್ಲಿ ಘಟನೆ ಸಂಭವಿಸಿದ್ದು, ರಾತ್ರಿ 1ಗಂಟೆ ಸಮಯದಲ್ಲಿ ನಡೆದಿದೆ. ಕಾರು ಚಾಲಕ ಅತೀ ವೇಗವಾಗಿ ಬಂದ ಪರಿಣಾಮ ಈ ಅವಘಡ ಸಂಭವಿಸಿದ್ದು, ಘಟನೆಯಿಂದ ಕಾರಿನ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ


ಅಪಘಾತ ಸಂಭವಿಸಿದ ಕೂಡಲೇ ಹೈಗ್ರೌಂಡ್ಸ್ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ. 


ಈ ಬಗ್ಗೆ ಹೈಗ್ರೌಂಡ್ಸ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

0 تعليقات

إرسال تعليق

Post a Comment (0)

أحدث أقدم