ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಾನಸಿಕ ಮತ್ತು ದೈಹಿಕ ಕ್ಷಮತೆಗೆ ಯೋಗ ಅತ್ಯಗತ್ಯ: ಡಾ|| ಚೂಂತಾರು

ಮಾನಸಿಕ ಮತ್ತು ದೈಹಿಕ ಕ್ಷಮತೆಗೆ ಯೋಗ ಅತ್ಯಗತ್ಯ: ಡಾ|| ಚೂಂತಾರು


ಮಂಗಳೂರು: ದಿನವಿಡೀ ನಿಂತುಕೊಂಡು 8 ರಿಂದ 12 ಗಂಟೆಯ ಕಾಲ ಕೆಲಸ ಮಾಡುವ ಗೃಹರಕ್ಷಕರಿಗೆ ದೈಹಿಕ ಆರೋಗ್ಯ ಅತೀ ಅಗತ್ಯ. ಟ್ರಾಫಿಕ್ ನಿಯಂತ್ರಣ, ನೆರೆ ನಿಯಂತ್ರಣ ಮತ್ತು ಬೆಂಕಿ ಅವಘಡ ಮುಂತಾದ ಒತ್ತಡದ ಸಂದರ್ಭದಲ್ಲಿ ಕೆಲಸ ನಿರ್ವಹಿಸುವಾಗ ಗೃಹರಕ್ಷಕರಿಗೆ ವಿಪರೀತ ಮಾನಸಿಕ ಒತ್ತಡದ ಸನ್ನಿವೇಶ ನಿರ್ಮಾಣವಾಗುತ್ತದೆ. ಈ ನಿಟ್ಟಿನಲ್ಲಿ ಗೃಹರಕ್ಷಕರಿಗೆ ದೈಹಿಕ ಕ್ಷಮತೆ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗ, ಧ್ಯಾನ ಮತ್ತು ಪ್ರಾಣಾಯಾಮ ಅತೀ ಅವಶ್ಯಕ. ಈ ಕಾರಣದಿಂದ ನಿರಂತರವಾಗಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕರಿಗೆ ಯೋಗ ತರಬೇತಿ ನಡೆಸಲಾಗುತ್ತಿದೆ. ಸಮಾಜದ ಸ್ವಾಸ್ಥ್ಯ ಕಾಪಾಡುವ ಗೃಹರಕ್ಷಕರಿಗೆ, ಅವರ ದೈಹಿಕ ಮತ್ತು ಮಾನಸಿಕ ಕ್ಷಮತೆ ಕಾಪಾಡಿಕೊಳ್ಳುವಲ್ಲಿ ‘ಯೋಗ’ ಅತ್ಯಗತ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಮತ್ತು ಪೌರ ರಕ್ಷಣಾದಳದ ಮುಖ್ಯ ಪಾಲಕ ಡಾ|| ಮುರಲೀ ಮೋಹನ್ ಚೂಂತಾರು ನುಡಿದರು.


8ನೇ  ವರ್ಷದ ವಿಶ್ವ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಜೂನ್ 21 ರಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಕಛೇರಿಯಲ್ಲಿ ಯೋಗ ಶಿಬಿರ ಜರುಗಿತು. ಸಮಾದೇಷ್ಟರಾದ ಡಾ|| ಚೂಂತಾರು ಹಾಗೂ 25 ಮಂದಿ ಗೃಹರಕ್ಷಕರು ಈ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದರು.


ಜಿಲ್ಲಾಡಳಿತ, ಆಯುಷ್ ಇಲಾಖೆ ಇವರ ಮಾರ್ಗದರ್ಶನದಂತೆ, ಖ್ಯಾತ ಯೋಗಗುರು ಗೋಪಾಲಕೃಷ್ಣ ದೇಲಂಪಾಡಿ ಹಾಗೂ ಯೋಗ ಶಿಕ್ಷಕಿ ಸುಮಾ ಇವರ ಸಹಕಾರದೊಂದಿಗೆ ಈ ಶಿಬಿರ ನಡೆಯಿತು. ದಿನಾಂಕ 9 ರಿಂದ 20 ರವರೆಗೆ 2 ವಾರಗಳ ಯೋಗ ತರಬೇತಿ ಪೂರ್ವಭಾವಿ ಶಿಬಿರ ನಡೆಸಲಾಗಿದೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 Comments

Post a Comment

Post a Comment (0)

Previous Post Next Post