ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹವ್ಯಕ ಕವನ: ಮಳೆ - ಯೋಗ

ಹವ್ಯಕ ಕವನ: ಮಳೆ - ಯೋಗ



ಮಳೆ ಬಂದು ಮೇಲ್ಮಣ್ಣು ಬೊದುಲಿತ್ತು ತಂಪಾತು/

ಕಳೆ ತುಂಬಿ ಗುಡ್ಡೆಂದ ನೀರಿಳಿತ್ತು

ಬೆಳೆ ಉಕ್ಕಿ ಕಾಂಗಿನ್ನು ಗೆದ್ದೆಲ್ಲಿ ತೋಟಲ್ಲಿ

ಜಳಕಕ್ಕೆ ಹೆರಟಿದವು - ಭೂಮಿಯಬ್ಬೆ.


ಬಾನಿಲ್ಲಿ ಮೋಡಗಳ ರಾಶಿಯೇ ತುಂಬಿದ್ದು

ಕಾನಲ್ಲಿ ಇಪ್ಪಾಂಗೆ ಕರಿ ಕಸ್ತಲೆ

ಕಾಣುತ್ತು ಹಗಲಿಲ್ಲಿ ಸುತ್ತುದೇ ಮಳೆಗಾಲ

ಕಾಣುವದು ಸಂತೋಷ - ಎಲ್ಲರಿಂಗೆ .


ಯೋಗದಾ ದಿನದಂದು ಮಳೆ ಬಂದು ಉಲ್ಲಾಸ,

ರೋಗಂಗೊ ಮುತ್ತುವಾ ಕಾಲ ಬಂತು

ಭೋಗಂಗೊ ಹದ ಮೀರಿ ಹಾಳಕ್ಕು ಆರೋಗ್ಯ,

ಸಾಗೆಕ್ಕು ನೆಮ್ಮದಿಯ -ಹಾದಿಲ್ಲಿಯೆ.


-ಗುಣಾಜೆ ರಾಮಚಂದ್ರ ಭಟ್


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 Comments

Post a Comment

Post a Comment (0)

Previous Post Next Post