ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಡಾ|| ಕೋಳ್ಯೂರು ರಾಮಚಂದ್ರರಾಯರಿಗೆ ಯಕ್ಷದೇಗುಲ ವಿಂಶತಿ ಪುರಸ್ಕಾರ

ಡಾ|| ಕೋಳ್ಯೂರು ರಾಮಚಂದ್ರರಾಯರಿಗೆ ಯಕ್ಷದೇಗುಲ ವಿಂಶತಿ ಪುರಸ್ಕಾರ

ವಸಂತ ಗೌಡ ಕಾಯರ್‍ತಡ್ಕ ರವರಿಗೆ, ದಿ| ಪುತ್ತೂರು ಶ್ರೀಧರ ಭಂಡಾರಿ ಸಂಸ್ಮರಣಾ ಪ್ರಶಸ್ತಿ


ಕಾಂತಾವರ: ಗ್ರಾಮೀಣ ಪ್ರದೇಶದಲ್ಲಿ ಆಟ- ಕೂಟ, ಶಿಕ್ಷಣ ಶಿಬಿರ, ಬಣ್ಣಗಾರಿಕೆ ಕಮ್ಮಟ- ಹೀಗೆ ಯಕ್ಷಗಾನೀಯ ಚಟುವಟಿಕೆ ಕಲೆಗಾಗಿ, ಕಲಾವಿದನಿಗಾಗಿ, ಕಲಾಸೇವೆ ಗೈಯುತ್ತಾ ಬೆಳೆದ ಯಕ್ಷದೇಗುಲ ಕಾಂತಾವರದ 20ನೇ ವಾರ್ಷಿಕ ಯಕ್ಷೋಲ್ಲಾಸ 2022 ಮುಂದಿನ ಜುಲೈ 24ರಂದು ದಿನಪೂರ್ತಿ ನಡೆಯಲಿದೆ.


ಅಂದು ನಡೆಯುವ ಸಂಭ್ರಮದಲ್ಲಿ ಯಕ್ಷಗಾನ ಕ್ಷೇತ್ರದ ನಿವೃತ್ತ ಹಿರಿಯ ಕಲಾವಿದ ಡಾ| ಕೋಳ್ಯೂರು ರಾಮಚಂದ್ರ ರಾಯರಿಗೆ ಯಕ್ಷದೇಗುಲ ವಿಂಶತಿ ಪುರಸ್ಕಾರ, ಧರ್ಮಸ್ಥಳ ಮೇಳದ ವಸಂತ ಗೌಡ ಕಾಯರ್ತಡ್ಕ ಇವರಿಗೆ ದಿ| ಪುತ್ತೂರು ಶ್ರೀಧರ ಭಂಡಾರಿ ಸಂಸ್ಮರಣಾ ಪ್ರಶಸ್ತಿ ಹಾಗೂ ವಿಂಶತಿ ಯುವ ಪುರಸ್ಕಾರ ಸಾಣೂರು ಗಣೇಶ ಶೆಟ್ಟಿ ಯವರಿಗೆ ಪ್ರದಾನ ಮಾಡಲು ಸಂಸ್ಥೆಯ ತೀರ್ಪುಗಾರರ ಸಮಿತಿಯಿಂದ ತೀರ್ಮಾನಿಸಲಾಯಿತು ಎಂದು ಪ್ರಧಾನ ಕಾರ್ಯಾಧ್ಯಕ್ಷ ಮಹಾವೀರ ಪಾಂಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 Comments

Post a Comment

Post a Comment (0)

Previous Post Next Post