ಬಂಟ್ವಾಳ: ತಾಲೂಕಿನ ಬಡಕಬೈಲು ಸಮೀಪದ ಗಾಣೆಮಾರಿನಲ್ಲಿ 2004ರಲ್ಲಿ ಸಂಬಂಧಿಕರ ಮಧ್ಯೆ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು 18 ವರ್ಷಗಳ ಬಳಿಕ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಟಿಪಳ್ಳ ಕೃಷ್ಣಾಪುರ ನಿವಾಸಿ ಹಮೀದ್ ಯಾನೆ ಪುತ್ತ(40) ಬಂಧಿತ ಆರೋಪಿ.
ಆತ ಪ್ರಸ್ತುತ ವಳಚ್ಚಿಲ್ ನಲ್ಲಿ ವಾಸವಾಗಿದ್ದು ಮೀನು ಮಾರಾಟದ ವೃತ್ತಿ ಮಾಡಿಕೊಂಡಿದ್ದ. ಆತ ಜೂ. ೫ರಂದು ಫರಂಗಿಪೇಟೆಯಲ್ಲಿ ತಿರುಗಾಡುತ್ತಿರುವ ಬಗ್ಗೆ ಬಂದ ಮಾಹಿತಿಯಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಗಲಭೆ ಪ್ರಕರಣದ ನಾಲ್ವರು ಆರೋಪಿಗಳಲ್ಲಿ ಈತ ಒರ್ವನಾಗಿದ್ದು, ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
إرسال تعليق