ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಜುಲೈ 3ರಂದು ಮಂಗಳೂರಿಗೆ ದೈವಜ್ಞ ಶ್ರೀಗಳ ಭೇಟಿ, ಗುರುವಂದನಾ ಕಾರ್ಯಕ್ರಮ

ಜುಲೈ 3ರಂದು ಮಂಗಳೂರಿಗೆ ದೈವಜ್ಞ ಶ್ರೀಗಳ ಭೇಟಿ, ಗುರುವಂದನಾ ಕಾರ್ಯಕ್ರಮ


ಮಂಗಳೂರು: ಸಮಸ್ತ ದೈವಜ್ಞ ಬ್ರಾಹ್ಮಣ ಸಮಾಜದ ಗುರುವರ್ಯರಾದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳವರು (ಶ್ರೀ ಜ್ಞಾನೇಶ್ವರೀ ಪೀಠ, ದೈವಜ್ಞ ಬ್ರಾಹ್ಮಣ ಮಠ, ಶ್ರೀ ಕ್ಷೇತ್ರ ಕರ್ಕಿ.ಹೊನ್ನಾವರ) ಮಂಗಳೂರು ಮಹಾನಗರಕ್ಕೆ ಚಿತ್ತೈಸಲಿರುವರು.


ಆ ಪ್ರಯುಕ್ತ ಮಂಗಳೂರು ದೈವಜ್ಞ ಬ್ರಾಹ್ಮಣ ಸಂಘ (ರಿ.), ದೈವಜ್ಞ ಮಹಿಳಾ ಮಂಡಳಿ ರಿ. ದೈವಜ್ಞ ಚಿನ್ನ ಬೆಳ್ಳಿ ಕೆಲಸಗಾರರ ಸಂಘ ರಿ. ದೈವಜ್ಞ ಯುವಕ ಮಂಡಳಿ ರಿ. ಇವರ ಆಶ್ರಯದಲ್ಲಿ ಜುಲೈ 3ರಂದು  ಭಾನುವಾರ ಬೆಳಿಗ್ಗೆ 10: 00 ಗಂಟೆಗೆ ಅಶೋಕ ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಗುರುವಂದನಾ ಮತ್ತು ಪಾದುಕಾ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.


ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ದೈವಜ್ಞ ಶ್ರೀ ಶ್ರೀ ಗಳವರು ದಿವ್ಯ ಸಾನಿಧ್ಯ ವಹಿಸುವರು. ಮಂಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ಆರ್. ಎಂ. ರೇವಣ್ಕರ್, ನೂತನ್ ಇಂಡಿಯನ್ ಗ್ಯಾಸ್ ಡಿಸ್ಟ್ರಿಬ್ಯೂಟರ್ಸ್ ನ ಶ್ರೀ ನಾಗರಾಜ ಶೇಟ್, ಹಾಗೂ ಮಂಗಳೂರು ದೈವಜ್ಞ ಬ್ರಾಹ್ಮಣ ಸಂಘ- ಸಂಸ್ಥೆಗಳ ಅಧ್ಯಕ್ಷರು ವೇದಿಕೆಯಲ್ಲಿ ಉಪಸ್ಥಿತರಿರುವರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 تعليقات

إرسال تعليق

Post a Comment (0)

أحدث أقدم