ಕುಂಬ್ಡಾಜೆಯಲ್ಲಿ ಕನ್ನಡ ಕಂದನ ಸಿರಿಚಂದನ ಗಿಡ
ಕುಂಬ್ಡಾಜೆ: "ಗಿಡ ನೆಡುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಅದರ ಸಂರಕ್ಷಣೆ ಮತ್ತು ಪೋಷಣೆ ಎಂಬ ಪರಿಣಾಮಕಾರಿ ಸಂದೇಶವನ್ನು, ಸಾರುವ ಹಾಗೂ ಅದನ್ನು ಕ್ರಿಯಾರೂಪದಲ್ಲಿ ಮಾಡಿ ತೋರಿಸುವ ಆ ಮೂಲಕ ಕಾಸರಗೋಡಿನ ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗೂ ನೈತಿಕ ಸ್ಟೈರ್ಯ ನೀಡುವ ಕನ್ನಡ ಕಂದನ ಸಿರಿಚಂದನ ಗಿಡ ಯೋಜನೆಯು ನಾಡಿಗೆ ಮಾದರಿ.” ಎಂದು ಕವಿ ಹಾಗೂ ಕೃಷಿಕ ದಯಾನಂದ ರೈ ಕಳ್ಳಾಜೆ ಅಭಿಪ್ರಾಯ ಪಟ್ಟಿದ್ದಾರೆ.
ಸಿರಿಚಂದನ ಕನ್ನಡ ಯುವ ಬಳಗವು ವಿಶ್ವಪರಿಸರ ದಿನಾಚರಣೆಯ ಭಾಗವಾಗಿ, ಪ್ರತಿ ವರುಷ ನಡೆಸುತ್ತಾ ಬರುತ್ತಿರುವ ಕನ್ನಡ ಕಂದನ ಸಿರಿಚಂದನ ಗಿಡ ಕಾರ್ಯ ಚಟುವಟಿಕೆಯ ಉದ್ಘಾಟನೆಯನ್ನು ಕುಂಬ್ಡಾಜೆ ಗ್ರಾಮ ಪಂಚಾಯತು ಸದಸ್ಯ ಪಾತೇರಿ ಅಬ್ದುಲ್ ರಝಾಕ್ ಟಿ ಬಿ ಅವರ ಮನೆಯ ಹಿತ್ತಲಲ್ಲಿ ನೆರವೇರಿಸಿ ರೈಯವರು ಮಾತನಾಡುತ್ತಿದ್ದರು.
ಪ್ರಕೃತಿ ಪ್ರೀತಿಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಲು ಮತ್ತು ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ನೈತಿಕ ಸ್ಥೈರ್ಯವನ್ನೂ ಪ್ರೋತ್ಸಾಹವನ್ನೂ ನೀಡುವ ಉದ್ದೇಶದಿಂದ ಕಳೆದ ಕೆಲವು ವರುಷಗಳಿಂದ ಸಿರಿಚಂದನ ಕನ್ನಡ ಯುವಬಳಗವು ಕನ್ನಡ ಕಂದನ ಸಿರಿಚಂದನ ಗಿಡ ಎಂಬ ಯೋಜನೆಯನ್ನು ಪುತಿ ವರುಷ ಜೂನ್ ತಿಂಗಳಲ್ಲಿ ನಡೆಸುತ್ತ ಬರುತ್ತಿದೆ. ಇದರ ಭಾಗವಾಗಿ ಈ ವರುಷ ಕುಂಬ್ಡಾಜೆ ಗ್ರಾಮದ ಮರಿಕಾನ ಶ್ರೀ ಸುಬ್ರಹ್ಮಣ್ಯ, ಎಲ್ ಪಿ ಶಾಲೆಯ ಮೂರನೆಯ ತರಗತಿಯ ವಿದ್ಯಾರ್ಥಿನಿ ಕು, ಆಯಿಷಾ ಹಿಸಾನ ಇವಳನ್ನು ಆಯ್ಕೆ ಮಾಡಲಾಗಿತ್ತು. ಆಯಿಷಾ ಹಿಸಾನಳ ಹೆತ್ತವರು ಮಲಯಾಳ ಕಲಿತವರಾದರೂ ಕನ್ನಡದ ಮೇಲಿನ ಅಭಿಮಾನದಿಂದ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗೆ ಸೇರಿಸಿದ್ದರು.
ಸಿರಿಚಂದನ, ಕನ್ನಡ ಯುವಬಳಗದ ಪರಿಸರ ಸಂರಕ್ಷಣಾ ಸಮಿತಿ ಸಂಯೋಜಕ ಕೀರ್ತನ್ ಕುಮಾರ್ ಸಿ ಎಚ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
`ಬಳಗದ ಮಾರ್ಗದರ್ಶಕರಾದ ಡಾ. ರತ್ನಾಕರ ಮಲ್ಲಮೂಲೆ ಈ ಕಾರ್ಯಚಟುವಟಿಕೆಯ ಪ್ರಾರಂಭ ಹಾಗೂ ಮಹತ್ವದ ಕುರಿತು ಮಾತನಾಡಿ, ವಿದ್ಯಾರ್ಥಿನಿ ಆಯಿಷಾ ಹಿಸಾನ ಅವರಿಗೆ ನೆನಪಿನ ಪುಮಾಣ ಪತ್ರ ನೀಡಿದರು. ಕಾರಡ್ಕ ಬ್ಲಾಕ್ ಪಂಚಾಯತು ಸದಸ್ಯೆ ನಳಿನಿ ಕೃಷ್ಣನ್ ಮಲ್ಲಮೂಲೆ, ಕೃಷಿಕ ಪಾತೇರಿ ರಾಜಾರಾಮ ಭಟ್, ಮರಿಕಾನ ಶ್ರೀ ಸುಬ್ರಹ್ಮಣ್ಯ ಶಾಲೆಯ ರಕ್ಷಕ ಶಿಕ್ಷಕ ಸಮಿತಿ ಅಧ್ಯಕ್ಷ ಅಬ್ದುಲ್ ಖಾದರ್, ಅಧ್ಯಾಪಿಕ ವಾಣಿಶ್ರೀ ಸಿ ಎಚ್, ಮಹೇಶ ಏತಡ್ಕ, ರಾಘವೇಂದ್ರ ಅಮ್ಮಣ್ಣಾಯ ಶುಭಹಾರೈಸಿದರು. ಕುಮಾರಿ ಆಯಿಷಾ ಹಿಸಾನ ಹಲಸಿನ ಗಿಡ ನೆಟ್ಟಳು.
ಕುಂಬ್ಡಾಜೆ ಗ್ರಾಮ ಪಂಚಾಯತಿನ ಸದಸ್ಯ ಹಾಗೂ ಹಿಸಾನಳ ತಂದೆ ಅಬ್ದುಲ್ ರಝಾಕ್ ಸ್ವಾಗತಿಸಿದರು. ಬಳಗದ ನಿಕಟಪೂರ್ವ ಕಾರ್ಯದರ್ಶಿ ರಾಜೇಶ್ ಸಾಮೆಕೊಚ್ಚಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು, ಕಾರ್ಯದರ್ಶಿ ಅನುರಾಧ' ಕಲ್ಲಂಗೂಡು ವಂದಿಸಿದರು. ಬಳಗದ ಅಧ್ಯಕ್ಷ ಕಾರ್ತಿಕ್ ಪಡೆ ನಿರೂಪಿಸಿದರು. ಮರಿಕಾನ, ಶ್ರೀ ಸುಬ್ರಹ್ಮಣ್ಯ ಶಾಲೆಯ ವಿದ್ಯಾರ್ಥಿನಿಯರಾದ ಕು. ಮನಸ್ಸಿ ಶರ್ಮ ಮತ್ತು ಕು. ಅನಿಶ ಪ್ರಾರ್ಥನೆ ಹಾಡಿದರು. ಬಳಗದ ಪದಾಧಿಕಾರಿಗಳಾದ ಸುನಿತಾ ಮಯ್ಯ, ಪವಿತ್ರ `ಎಡನೀರು, ಜಯಕುಮಾರ ಪಿ ಮುಂತಾದವರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
إرسال تعليق