ಸುಳ್ಯ: ಸುಳ್ಯದ ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗವು ಆಯೋಜಿಸಿದ್ದ ದಿ|| ವಿಶ್ವದೀಪ್ ಕುಂದಲ್ಪಾಡಿ ಶೋಕಗಾನ ಸಂಗೀತ ಸ್ಪರ್ಧೆಯು ವಾಟ್ಸಪ್ಪ್ ಆನ್ ಲೈನ್ ಲ್ಲಿ ಜರುಗಿತು. ರಾಜ್ಯದ ಒಟ್ಟು 30 ಗಾಯಕರು ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸಂಗೀತ ಸ್ಪರ್ಧೆಯ ನಿರ್ಣಾಯಕರಾಗಿ ಸುಳ್ಯದ ಗಾಯಕ ಮತ್ತು ಜ್ಯೋತಿಷಿ ಹಾಗೂ ವಾಷ್ಠರ್ ಫೈವ್ ಸ್ಟಾರ್ ಬಳಗದ ಅಧ್ಯಕ್ಷರಾದ ಎಚ್. ಭೀಮರಾವ್ ವಾಷ್ಠರ್ ರವರು ಮತ್ತು ಗಾಯಕ ವಿಜಯ್ ಮಡಿಕೇರಿ ರವರು ಸಹಕರಿಸಿದರು.
ಅಗಲಿದ ವಿಶ್ವದೀಪ್ ಕುಂದಲ್ಪಾಡಿ ಶೋಕಗಾನ ಸಂಗೀತ ಸ್ಪರ್ಧೆಯಲ್ಲಿ ಅತ್ಯುತ್ತಮವಾಗಿ ಹಾಡು ಹಾಡಿದ ಗಾಯಕರಾದ ಮೌರ್ಯ ನಾರ್ಕೋಡು ಸುಳ್ಯ ಮತ್ತು ತನ್ಮಯ್ ಎಮ್ ಸೋಮಯಾಜಿ ಸುಳ್ಯ ರವರು ವಾಷ್ಠರ್ ಫೈವ್ ಸ್ಟಾರ್ ಸಿಂಗರ್ ಪ್ರಶಸ್ತಿ ಪತ್ರ ಪಡೆಯಲು ಆಯ್ಕೆಯಾದರು. ಇವರಿಗೆ ಜೂಲೈ ತಿಂಗಳಿನಲ್ಲಿ ನಡೆಯುವ ಸಂಗೀತ ಸಂಭ್ರಮ ಎಂಬ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವದು.
ಪ್ರಥಮ ಬಹುಮಾನಕ್ಕೆ ಎಚ್. ನಾಗೇಶ್ ವಾಷ್ಠರ್ ಬ್ರಹ್ಮಾವರ, ರಾಧಾ ಉಪ್ಪಳ ಮಂಗಳೂರು, ಮಹೇಶ್ ಪೈ ಸುಳ್ಯ, ಬೇಬಿ ಐಶಾನಿ ಸುಳ್ಯ, ಶಾಲ್ಮಿಲಿ ಡಿ ಕೆ ಸುಳ್ಯ, ಧನುಜಾ ಕರ್ಕೇರ ಉಡುಪಿ, ಸ್ನಿಗ್ಧ ಎನ್ ಎಸ್ ಸುಳ್ಯ, ಅಶ್ಮಿತ್ ಮಂಗಳೂರು, ರವಿ ಪಾಂಬಾರ್ ಪುತ್ತೂರು, ಚೇತನ್ ಅಮೀನ್ ಉಡುಪಿ, ವಸಂತಿ ಎನ್ಮೂರು, ಗುರುರಾಜ್ ಎಮ್ ಆರ್ ಕಾಸರಗೋಡು ರವರು ಆಯ್ಕೆಯಾದರು.
ದ್ವಿತೀಯ ಬಹುಮಾನಕ್ಕೆ ಸನತ್ ಕೆ ಐವರ್ನಾಡು, ಸುಭಾಷಿಣಿ ಚಂದ್ರ ಕಾಸರಗೋಡು, ಹಾ ಮ ಸತೀಶ್ ಬೆಂಗಳೂರು, ವಿಪಿನ್ ತೊಕ್ಕುಲಿ ಮಡಿಕೇರಿ, ಪ್ರಸಾದ್ ಆಚಾರ್ ಮಂಗಳೂರು, ಸದಾನಂದ್ ನೆಲ್ಲಿಯಡ್ಕ ಕಾಸರಗೋಡು, ಪೊಲೀಸ್ ಕೃಷ್ಣ ಸೀತಂಗೋಳಿ, ಕಾವ್ಯಾ ಕೆ ವಿ ಸೀತಂಗೋಳಿ, ಅವನಿ ಎಂ ಎಸ್ ಸುಳ್ಯ ರವರು ಆಯ್ಕೆಆದರು. ತೃತೀಯ ಬಹುಮಾನಕ್ಕೆ ಬೇಬಿ ಯಶ್ವಿಕ ಕುಂಟಿನಿ ಸುಳ್ಯ, ಪೂಜಾಶ್ರೀ ಬಳ್ಳಡ್ಕ ಸುಳ್ಯ, ಅಶ್ವಿಜ್ ಆತ್ರೇಯ ಸುಳ್ಯ, ಕೋಮಲ ಮೈಸೂರು ಆಯ್ಕೆಯಾದರು. ದಿ|ವಿಶ್ವದೀಪ್ ಕುಂದಲ್ಪಾಡಿ ರವರ ತಂದೆ ಲೋಕನಾಥ್ ಕುಂದಲ್ಪಾಡಿ ಮತ್ತು ತಾಯಿ ರೇಣುಕಾರವರು ಸಹಕರಿಸಿದರು.
*****
ಇತ್ತೀಚಿಗೆ ಅಪಘಾತದಲ್ಲಿ ಅಗಲಿದ ವಿಶ್ವದೀಪ್ ಕುಂದಲ್ಪಾಡಿ ಈ ಬಾಲಕ ಪ್ರತಿಭಾನ್ವಿತ. ಸುಳ್ಯದ ಪೆರಾಜೆಯ ಲೋಕನಾಥ್ ಮತ್ತು ರೇಣುಕಾ ದಂಪತಿಗಳ ಏಕೈಕ ಪುತ್ರ. ಸುಳ್ಯದ ಸಂತ ಜೋಸೆಫ್ ಶಾಲೆಯಲ್ಲಿ 10 ನೇ ತರಗತಿ ಓದುತ್ತಿದ್ದ ಬಾಲಕ ಕಾಲನ ಕರೆಗೆ ಓಗೊಟ್ಟು ನಮ್ಮಿಂದ ಬಹುದೂರ ಸಾಗಿದ್ದಾನೆ. ಸುಳ್ಯದ ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ಕ್ರೀಯಾಶೀಲ ಗಾಯಕ ಹಲವಾರು ಸ್ಪರ್ಧೆಗಳಲ್ಲಿ ಬಹುಮಾನಗಳ ಜೊತೆಯಲ್ಲಿ ಸನ್ಮಾನ ಕೂಡ ಪಡೆದಿದ್ದ. ಅವನ ಸ್ಮರಣಾರ್ಥ ಭೀಮರಾವ್ ವಾಷ್ಠರ್ ಅವರು ಈ ಶೋಕಗಾನ ಸ್ಪರ್ಧೆಯನ್ನು ಆಯೋಜಿಸಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
Post a Comment